Saturday, September 18, 2010

tulu proverb

ತುಳುವಿನ ವಿಶ್ವ ಕೋಶವಾಗಿರುವ ತುಳು ನಿಘಂಟು ಇಂಟರ್ನೆಟ್ನಲ್ಲಿ ಲಭ್ಯವಿದೆ -[ತುಳುವರ್ಲ್ದ್ .ಓಆರಜಿ ]ಇದರಲ್ಲಿ ನಾನು ಕಂಚಲ್ { ಹಾಗಲಕಾಯಿ ] ಹುಡುಕಿದೆ. "ಕಂಚಾಲ್ ಇತ್ತಂದ ಎನ್ಚಲಾ ಉಣೋಲಿ" ಎಂಬುದು ಸೊಗಸಾದ ತುಳುಗಾದೆ. -ಹಾಗಲಕಾಯಿ ಇದ್ದರೆ ಹೇಗಾದರೂ ಊಟ ಮಾಡಬಹುದು. ಇದರ ಜೊತೆಯಲ್ಲಿ ಇನ್ನೊಂದು ಚಂದದ ಗಾದೆ ಇದೆ -ಪೆಲಕಾಯಿದ ಮೈ ಮುಳ್ಳುಂದು ಕಂಚೋಲು ಪಂತುಂದುಗೆ -ಹಲಸಿನಕಾಯಿ ಮೈ ಎಲ್ಲ ಮುಳ್ಳು ಎಂದು ಹಾಗಲಕಾಯಿ
ಹೇಳಿತಂತೆ .ತುಳು ಸಾಹಿತಿ ಆಮ್ರತ ಸೋಮೇಶ್ವರ ಕಾಲಕ್ಕೆ ತಕ್ಕ ಕೋಲ ಎಂಬಂತೆ ನಮ್ಮ ಕಾಲದ ಹೊಸ ಗಾದೆಗಳನ್ನು ಬರೆದಿದ್ದಾರೆ.

No comments:

Post a Comment