ಪಾರ್ದನಗಳು (ಪಾಡ್ದನ, ಪಾರ್ದನ) ತುಳುನಾಡಿನ ಮೌಖಿಕ ಕಾವ್ಯಗಳು. ಪಾರ್ದನ ತುಳುನಾಡಿನ ಜನಪದ ಪುರಾಣ ಕಾವ್ಯ ಹಾಗೂ ಲಾವಣೆ ರೂಪದ ಕಥನ ಕವನ; ಭೂತಗಳ ಅಥವಾ ವೀರಪುರುಷರ ಪ್ರತಾಪದ ಕವನ ಕಥನ. ಜನಪದ ಮಹಾಕಾವ್ಯದ ಅನೇಕ ಲಕ್ಷಣಗಳು ’ಕೋಟಿ-ಚೆನ್ನಯ’ ಪಾರ್ದನದಲ್ಲಿವೆ. ಈ ಪಾರ್ಧನ ಸಾಂಸ್ಕೃತಿಕ ವೀರರಾದ ಕೋಟಿ-ಚೆನ್ನಯರ ಸಾಧನೆಗಳನ್ನು ವಿವರಿಸುತ್ತದೆ. ’ಕೋಟಿ-ಚೆನ್ನಯ’ ರು ತಮ್ಮ ವಿರೋಧಿಗಳೊಂದಿಗೆ ಸೆಣಸಾಡಿ ಪ್ರಾಣತ್ಯಾಗ ಮಾಡಿ ತುಳುನಾಡಿನ ಜನ ಪದ ಆರಾಧನಾ ಪರಂಪರೆಗೆ ಸೇರಿದ್ದಾರೆ. ನೂರಾರು ಮಂಡಿ ಜನಪದ ವೃತ್ತಿ ಗಾಯಕರು ಈ ಪಾರ್ದನವನ್ನು ಬೆಳೆಸಿದ್ದಾರೆ. ’ಕೋಟಿ-ಚೆನ್ನಯ’ ಪಾರ್ದನ ತುಳು ನಾಡಿನ ಒಂದು ಸಾಂಸ್ಕೃತಿಕ ವರ್ಗದ ಪುರಾಣವೇ ಆಗಿದೆ.
ಮೇನರ್ ಅವ್ರು ಸಂಗ್ರಹಿಸಿದ ’ಕೋಟಿ-ಚೆನ್ನಯ’ ಪಾರ್ದನ ೧೮೮೬ರಲ್ಲಿ ಪ್ರಕಟವಾಯಿತು. ಅನಂತರ ಈ ಮೌಖಿಕ ಕಾವ್ಯದ ಹಲ್ವು ಪಠ್ಯಗಳು ಪ್ರಕಟವಾಗಿವೆ. ’ಕೋಟಿ-ಚೆನ್ನಯ್ಯ ಪಾರ್ದನ ಸಂಪುಟ್’ದ ಸಂಪಾದಕ ದಾಮೋದರ ಕಲ್ಮಾಡಿಯವ್ರು ಈ ಗ್ರಂಥದ ಪ್ರಸ್ತಾವನೆಯಲ್ಲಿ ಬರೆದಿರುವಂತೆ, "ಈಗಾಗಲೆ ಲಿಖಿತ ರೂಪದಲ್ಲಿ ಲಭ್ಯವಿದ್ದ ಮೇನರ್ ಸಂಗ್ರಹ (೧೮೮೬) ಮತ್ತು ತುಳುನಾಡಿನ ವಿವಿಧ ಪ್ರದೇಶಗಳಿಂದ ಆಯ್ದ ನರಂಗ ಪರವ, ಪೂವಪ್ಪ ಪರವ, ಬಾಡು ಪರವ, ಪುಟ್ಟಿ ಪರವ, ಪುತ್ತ ಪರವ, ಈ ಐವರ ಪಾರ್ದನ ರೂಪಗಳ ಜೊತೆಗೆ ಶ್ರೀಮತಿ ಐತಕ್ಕೆ ಪೂಜಾರ್ತಿಯವರ್ ಪಾರ್ದನವನ್ನೂ ಸಂಗ್ರಹಿಸಲಾಯಿತು.
ಸಂಪುಟದ ನಾಂದಿ-ಬದುಕು, ಅಂತ್ಯ ಈ ಮೂರು ಅಧ್ಯಾಯಗಳಿಗೆ ಅಧಿಕೃತವಾಘಿ ಹೊಂದುವುದನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಶ್ರೀ ನರಂಗ ಪರವರು ಹೇಳಿದ ಪಾಡ್ದನವನ್ನು ನಾಂದಿ, ಬದುಕು ಅಧ್ಯಾಯಗಳಿಗೆ ಶ್ರೀ ಪೂವಪ್ಪ ಪರವರು ಹಾಡಿದ ಪಾರ್ದನ ಸೂಕ್ತವೆನಿಸಿದ್ದು ಅದನ್ನು ಬಳಸಿ ಕೊಳ್ಳಲಾಗಿದೆ. ತೀರಾ ಅಲಭ್ಯವಾಗಿದ್ದ ದೇಯಿ ಬೈದೆತಿಯ ಪ್ರಾರಂಭದ ಕಥಾನಕ್ ಶ್ರೀಮತಿ ಐತಕ್ಕೆ ಪೂಜಾರ್ತಿ ಯವರಿಂದ ದೊರೆತು ಅದನ್ನು ಬಳಸಿಕೊಳ್ಳಲಾಗಿದೆ."
ಇತ್ತೀಚೆಗಿನ್ ಜಾನಪ್ದ ವಿದ್ವಾಂಸರು ಏಕೈಕ ಗಾಯಕ್, ಗಾಯಕಿ ಪ್ರಸ್ತುತ ಪಡಿಸಿದ, ಸಂಪಾದಕರ ಹಸ್ತಕ್ಷೇಪವಿಲ್ಲದ ಪಠ್ಯವನ್ನು ಅಧಿಕೃತವೆಂದು ಪರಿಗಣೆಸುತ್ತಾರೆ.ಫಿನ್ಲೆಂಡ್ ನ ವಿದ್ವಾಂಸ ಪ್ರೊಲಾರಿ ಹೊಂಕೊ ಅವರು ಇತ್ತೀಚಿಗೆ ಸಂಪಾದಿಸಿ ರುವ ’ಸಿರಿ ಪಾಡ್ದನ’ (ಗೋಪಾಲ ನಾಯ್ಕ) ಈ ಮಾದರಿಯಲ್ಲಿ. ’ ಕೋಟಿ-ಚೆನ್ನಯ’ ಪಾರ್ದನವನ್ನು ಈ ರೀತಿ ಸಂಪಾದಿಸಲು ಸಾಧ್ಯವಿರಲಿಲ್ಲವೇ? "ಯಾವನೇ ಒಬ್ಬ ವಕ್ತ್ಯವಿನಿಂದ ಪೂರ್ಣಪಾಠ ಲಭ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಂಗ್ರಹಕ್ಕೆ ಪರಿಶ್ರಮ ಪಟ್ಟಾದರೂ ಪಾರ್ದನದ ಪೂರ್ಣಪಠ್ಯವನ್ನು ಒದಗಿಸುವುದು ನಮ್ಮ ಆಶಯ" ಎನ್ನುತ್ತಾರೆ ಸಂಪಾದಕರಾದ ದಾಮೋದರ ಕಲ್ಮಾಡಿ. ಈ ಸಂಪುಟದಲ್ಲಿ ಪಾರ್ದನದ ಗಾಯಕರನ್ನು ಅಲಕ್ಷಿಸಲಾಗಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯ ಇತ್ತೀಚೆಗೆ ಪ್ರಕಟಿಸಿರುವ ಜನಪದ ಮಹಾ ಕಾವ್ಯ ಸಂಪುಟಗಳಲ್ಲಿ ಜನಪದ ಗಾಯಕ ರಿಗೆ ಸೂಕ್ತ ಸ್ಥಾನ-ಮಾನ ನೀಡಿರುವುದನ್ನು ಗಮನಿಸಬೇಕು.
ಈ ಸಂಪುಟದಲ್ಲಿ ಕೋಟಿ-ಚೆನ್ನಯ ಪಾರ್ದನವನ್ನು ಈ ರೀತಿ ವಿಂಗಡಿಸಲಾಗಿದೆ.(೧) ಪಾರ್ದನದ ಪೀಠಿಕೆ.(೨) ಬೆರ್ಮೆರೆ ಸಂದಿ (೩) ಕೇಂಜವ ಹಕ್ಕಿಯ ಸಂದಿ (೪) ಏಕಪಾಲೇರು ಧೈಯಾರು ಸಂದಿ (೫)ಬಲ್ಲಾಳರ ಸಂದಿ (೬) ದೇಯಿ ಬೈದತಿ ಸಂದಿ(೯) ಕೊಲಲ ಸಾಧನೆಯ ಸಂದಿ. ಪಾಡ್ದನದ ಸುಮಾರು ಹತ್ತು ಹನ್ನೆರಡು ಸಾಲುಗಳನ್ನು ಕನ್ನಡ ಲಿಪಿಯಲ್ಲಿ ಕೊಟ್ಟು ಅದರ ಕೆಳಗಡೆ ಶಬ್ದಾರ್ಥವನ್ನು ನೀಡಲಾಗಿದೆ. ಜೊತೆಗೆ ಕನ್ನಡದಲ್ಲಿ ಸಂಕ್ಷಿಪ್ತ ಭಾವಾರ್ಥ ನೀಡಿ ಕೆಲವು ಕಡೆ ಟಿಪ್ಪಣೆಗಳನ್ನು ನೀಡಲಾಗಿದೆ.
ಕೋಟಿ-ಚೆನ್ನಯರ ವಾಗ್ದಾನ ಹೀಗಿದೆ-"ಅಯಾ ಬಲ್ಲಾಲೆ
ಎಂಕಲೆಗ್ ಅವಾಂಡನೆ
ಜಾತಿ ಬೇದೊ ತೂವಂದನೆ
ಪಂಡೆನಾಯಿ
ಎಂಕಲೆಗ್ ಗರೋಡಿ ಕಟ್ಟಾಲೆ
ಗರೋಡಿ ಕಟ್ಟಾದ್
ಕಾಯೊಡಿತ್ತಿನಾ
ಮಾಯೊ ಸೇರ್ ನಗಾ
ಮಾಯೊಡೆಂಕುಲೆಗ್
ನೇಮೊ ನೆರಿ ಕೊರೊಂದು ಬಲ್ಲೆಂದು
ಒಂಜೆ ಪಂಡೇರ್
ನೆನೆತ್ತಿನಡೆ ನಿರ್ಮಿತ್ತಾವೊ
ನ್ಯಾಯೊಗು ಸಾರೆತ್ಯಾಪೊ
ಮಾಯೊಡೆಂಕುಲು
ನಂಬಿನಕ್ಲೆಗ್ ಇಂಬು ಕೊರೊಂದು
ಎಂಕುಲು ಬರುವೊ
ಪಂಡೊ ಬಾಲೆಲು
ಬುಲೆ ಬಾಗ್ಯೊಗು
ದಯ ರಕ್ಷಣೆ ಎಂಕುಲು ಕೊರುವೊ.
ಕೋಟಿ ಚೆನ್ನಯ, "ಬಲ್ಲಾಳರೆ, ಜಾತಿಭೇದ ನೋಡದೆ ನಮಗೆ ಗರಡಿ ಕಟ್ಟಿಸಿ ಎಂದರು. ಈ ದೇಹದಲ್ಲಿರುವ ನಾವು ದೇಹ ತ್ಯಜಿಸಿದಾಗ ಬೆರ್ಮರ ಪಾದ ಸೇರಿದಾಗ್ ನಮಗೆ ನೇಮೋತ್ಸವವನ್ನು ಕೊಡುತ್ತಾ ಬನ್ನಿ. ನಿಮ್ಮ ಇಷ್ಟಾರ್ಥವನ್ನು ನೆರವೇರಿಸುತ್ತೇವೆ. ನೆನೆಸಿದಲ್ಲಿ ನೆಲೆಯಾಗುತ್ತೇವೆ. ನ್ಯಾಯಕ್ಕೆ ಗೆಲುವು ತಂದು ಕೊಡುತ್ತೇವೆ. ನುಡಿದ ನ್ಯಾಯಕ್ಕೆ ಸಾರಥಿಯಾಗುತ್ತೇವೆ. ಕಾರಣಿಕದಲ್ಲಿ ಅದೃಶ್ಯರಾಗಿ ರಕ್ಷಣೆ ದಯೆ, ರಕ್ಷಣೆ ನೀಡುತ್ತೇವೆ" ಎಂದರು.(ಪುಟ-೩೦೪, ೩೦೫.
ತುಳುನಾಡಿನ ಕೋಟಿ-ಚೆನ್ನಯರ ಪಾರ್ದನವನ್ನು ಕನ್ನಡಿಗರಿಗೆ ನೀಡಿರುವ ಸಂಪಾದಕ ಮಂಡಳಿಯವರು, ಕನ್ನಡ ಪುಸ್ತಕ ಪ್ರಾಧಿಕಾರದ ನಿರ್ದೇಶಕರು ಅಭಿನಂದನಾರ್ಹರು.
ಮುರಳೀಧರ ಉಪಾಧ್ಯ ಹಿರಿಯಡಕ
ಕೋಟಿ-ಚೆನ್ನಯ ಪಾರ್ದನ ಸಂಪುಟ
ಸಂಪಾದಕ-ದಾಮೋದರ ಕಲ್ಮಾಡಿ
ಪ್ರ: ಕನ್ನಡ ಪುಸ್ತಕ ಪ್ರಾಧಿಕಾರ,
ಚಾಮರಾಜಪೇಟೆ, ಬೆಂಗಳೂರು
ಮುದ್ರಣ:೨೦೦೨ ಬೆಲೆ:ರೂ.೨೦೦
No comments:
Post a Comment