Thursday, May 9, 2013

ಭೂತಗಳ ಅದ್ಭುತ ಜಗತ್ತಿನಲ್ಲಿ -ದುಗ್ಗಲಾಯ ದೈವ -Dr. Laxmi Prasad

laxmiprasad: ಭೂತಗಳ ಅದ್ಭುತ ಜಗತ್ತಿನಲ್ಲಿ -ದುಗ್ಗಲಾಯ ದೈವ

DUGGALAYA DAIVA

BHUTA WORSHIP IN  TULUNADUPhoto: ಭೂತಗಳ ಅದ್ಭುತ ಜಗತ್ತಿನಲ್ಲಿ -ದುಗ್ಗಲಾಯ ದೈವ:ಈ  ದೈವಕ್ಕೆ  ಹೆಚ್ಚಾಗಿ ಪುತ್ತೂರು ಬಂಟ್ವಾಳ ಸುಳ್ಯ ಪರಿಸರದಲ್ಲಿ ಆರಾಧನೆ ಇದೆ .ಸುಳ್ಯದ ದುಗ್ಗಳದ್ಕ ಮುಉಲ ಸ್ಥಾನ.ಹಿರೆಬಂಡಾಡಿಯ ಬಾರಿ  ಬಲ್ಲಾಳ ಅರಸನಿಗೆ ಬುಳೆರ ಗುತ್ತಿನಿಂದ ಮದುವೆಯಾಗುತ್ತದೆ . ಕೆಲವು ತಿಂಗಳುಗಳಲ್ಲೇ ದಂಪತಿಗಳ ನಡುವೆ ಜಗಳ ಆಗಿ ಹೆಂಡತಿ ತವರಿಗೆ ಹೋಗಿ ಗಂಡನ ವಿರುದ್ಧ ಯುದ್ಧಕ್ಕಾಗಿ ಬರುತ್ತಾಳೆ . ಆಗ ನಿದ್ರೆ ಮಾಡುತ್ತಿದ್ದ ಬಲ್ಲಾಳನ ಕನಸಿನಲ್ಲಿ ದುಗ್ಗಲಾಯ ಭೂತ ಕಾಣಿಸಿಕೊಂಡು ಯುದ್ಧ ಮಾಡು ಇಲ್ಲವೇ ಮಂಜೋತಿ ಕಾಡಿಗೆ ಓದಿ ಹೋಗುವಂತೆ ತಿಳಿಸುತ್ತದೆ ಅವನು ಕಾಡಿಗೆ ಓದಿ ಹೋಗುತ್ತಾನೆ ಬಲ್ಲಾಳನ ರೂಪದಲ್ಲಿ ಬಂದ ಭೂತ ಯುದ್ಧ ಮಾಡಿ ಅವನ ಹೆಂಡತಿಯನ್ನು ಕೊಳ್ಳುತ್ತದೆ ಮುಂದೆ ಕನ್ನದರಸನ ಜೊತೆ ಯುದ್ಧ ಮಾಡಿ ಆತನನ್ನು ಸೋಲಿಸುತ್ತದೆ ನಂತರ ದುಗ್ಗಳದ್ಕಕ್ಕೆ ಬಂದು ಪುನ್ದ್ಯೆದ ಮರದ ಅಡಿಯಲ್ಲಿ ಮಲಗುತ್ತದೆ ಆಗ ಕೊಇಕುಲಿ ಹದಿನಾರು ಮನೆಯವರು ಮತ್ತು ಬಂಗೆರರು ಕೊತೆಕಟ್ಟಿ ನಿಂತಾಗ ಅವರಿಗೂ ಭೂತಕ್ಕೂ ಯುದ್ಧವಾಗಿ ಕೋಟೆಯನ್ನು ಭೂತ ನಾಶ ಮಾಡುತ್ತದೆ ಮುಂದೆ ದುಗ್ಗಲಾಯ ದೈವ ಮನುಷ್ಯ ರುಪನ್ನು ತೊರೆದು ಸುತ್ತು ಕೋಟೆ ಚಾಮುಂಡಿಯಾಗಿ ತಲಕಾವೇರಿಯ ಕಾವೇರಮ್ಮನ ಸನ್ನಿಧಿಯಲ್ಲಿ ನಿಲ್ಲುತ್ತದೆ . 
ವಾಸ್ತವಿಕ ನೆಲೆಯಲ್ಲಿ ಹೇಳುವುದಾದರೆ ದುಗ್ಗಲಾಯ ಹೆರೆಬಂದಾದಿಯ ಜನಾನುರಾಗಿ ಅರಸ ಇರಬೇಕು ಆತ ಯುದ್ಧದಲ್ಲಿ ಹೆಂಡತಿಯನ್ನು ಸೋಲಿಸಿ ಕೊಂಡಾಗ ಪ್ರತೀಕಾರಕ್ಕಾಗಿ ಇನ್ನೊಬ್ಬರಸ  (ಈತನನ್ನು ಕನ್ನಡರಸ ಎಂದಿರುವುದು ಇತಿಹಾಸ  ದೃಷ್ಟಿಯಿಂದ ಬಹಳ ಮಹತ್ವದ್ದು . ಬಹುಶ್ ಈತ  ಬಲ್ಲಳರಸನ ಸಂಬಂದಿ ಇರಬಹುದು )ಈತನ ಮೇಲೆ ಯುದ್ಧ ಸಾರಿದಾಗ ಕೂಡ ಆತನನ್ನು ಬಲ್ಲಾಳ ಸೋಲಿಸಿದ್ದಾನೆ.ಇವನನ್ನು ಯುದ್ಧ ಮಾಡಿ ಗೆಲ್ಲಲು ಅಸಾಧ್ಯ ಎಂದರಿತು ಕೊಯ್ಕುಳಿ ಮತ್ತು ಬಂಗೆರರು ಇವನು ಮಲಗಿರುವಾಗ ಸುತ್ತು ಕಟ್ಟಿ ಇವನನ್ನು ಸೋಲಿಸಿಸರಬಹುದು . ಈತ ಮರಣವನ್ನಪ್ಪಿರಬಹುದು. ಸಾಹಸಿಯೂ ಜನಾನುರಾಗಿಯು ಆಗಿದ್ದ  ಹಿರೇ ಬಂಡಾಡಿ  ಬಲ್ಲಾಳರಸ ಮೂಡೆ ದೈವತ್ವವನ್ನು ಪಡೆದು ದುಗ್ಗಲಾಯ ದೈವವಾಗಿ ಆರಾಧಿಸಲ್ಪಟ್ಟಿರಬಹುದು . 
ಹಿರಿಯ ವಿದ್ವಾಂಸರಾದ ಡಿ ಜಿ ನಡಕ ಅವರು  ಎಡಮಂಗಳದ ಮಾಲಿನ್ಗರಾಯ ಬೆಳ್ಳಾರೆಯ ದಾಲ್ಸುರಾಯ ಮತ್ತು ದುಗ್ಗಲಾಯರು ವಿಜಯ ನಗರದ ಅರಸರ ಕಾಲದಲ್ಲಿ ಪ್ರಚಲಿತವಿದ್ದ ರಾಯ ಪದ್ದತಿಯಂತೆ ಆದಾಯ ಸಂಗ್ರಹಿಸುವ ರಾಯ ಎಂಬ ಅಧಿಕಾರಿಗಳಿಗೆ ಸಂಬಂಧಿಸಿದ  ದೈವಗಳು ಎಂದು ಅಭಿಪ್ರಾಯ ಪಟ್ಟಿದ್ದಾರೆ . ಈ ಬಗ್ಗೆ ಅಧ್ಯನ ನಡೆದರೆ ತುಳುನಾಡಿನ ಇತಿಹಾಸಕ್ಕೆ ಒಂದು ಬಲವಾದ ಚೌಕಟ್ಟು ಸಿಗಬಹುದು

1 comment:

  1. Please write if you could find more information about Duggalaya daiva

    ReplyDelete