Sunday, October 31, 2010

TULU SHORT STORIES

ತುಳು ಸಣ್ಣಕತೆ

 ಮುರಳೀಧರ ಉಪಾಧ್ಯ ಹಿರಿಯಡಕ
 ತುಳು ಜನಪದ ಕತೆಗಳ ಲೋಕ ಸಮೃದ್ಧವಾಗಿದೆ. ಗೀತಾ ಕುಲಕಣರ್ಿ ಅವರ 'ತುಳು ಜಾನಪದ ಕತೆಗಳು' (1981), ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ 'ತುಳುವರ ಜನಪದ ಕತೆಗಳು' (1987), ಡಾ| ಪುರುಷೋತ್ತಮ ಬಿಳಿಮಲೆ ಅವರ 'ಅಜ್ಜಿಕತೆಕುಲು' - ಇಂಥ  ಕೆಲವು ಸಂಕಲನಗಳು ಪ್ರಕಟವಾಗಿವೆ. ಸೇವ ನವಿರಾಜ ಮಲ್ಲ, ಕನರಾಡಿ ವಾದಿರಾಜ ಭಟ್, ಡಾ| ವಾಮನ ನಂದಾವರ, ಡಾ| ಬಿ. ಎ. ವಿವೇಕ ರೈ, ಅಮೃತ ಸೋಮೇಶ್ವರ, ಡಾ| ಪುರುಷೋತ್ತಮ ಬಿಳಿಮಲೆ - ಇವರೆಲ್ಲ ತುಳು ಜನಪದ ಕತೆಗಳನ್ನು ಸಂಗ್ರಹಿಸಿದ್ದಾರೆ. ಎ. ಕೆ. ರಾಮಾನುಜನ್ ಅವರ 'ಪೊಕ್ ಟೆಲ್ಸ್ ಫ್ರಮ್ ಇಂಡಿಯಾ ' ಸಂಕಲನದಲ್ಲಿ ಕೆಲವು ತುಳು ಕತೆಗಳಿವೆ.
 ಎಂ. ವಿ. ಹೆಗ್ಡೆಯವರ 'ಮದಿಮಾಳತ್ತ್ ಮದಿಮಾಯೆ' (1933) ಗಾಂಧೀಯುಗದಲ್ಲಿ ಪ್ರಕಟವಾದ ಒಳ್ಳೆಯ ಕತೆ 'ಜವನೆರೆ ಕೂಟ'ದ ಮೋಹನ ಶೆಟ್ಟರು ಮದುಗಳ ವೇಷಧರಿಸಿ, ಕೊರಗ ಶೆಟ್ಟರ ಐದನೇ ಮದುವೆ ನಿಲ್ಲಿಸುವುದು - ಈ ಕತೆಯ ತಿರುಳು. ಇದು ಆಧುನಿಕ ತುಳು ಕಥಾಸಾಹಿತ್ಯದ ಮೊದಲ ಕತೆ. 'ಪೊಸ ಜೀವನ' (1973) ಸಂಕಲನದ ಕತೆಗಾರ ರಮೇಶ್ ಕಾನರ್ಾಡೆ ತನ್ನ ಯೌವ್ವನದಲ್ಲಿಯೇ (ನಿಧನ 1976) ತೀರಿಕೊಂಡರು. ಪುರುಷಪ್ರಧಾನ ಸಮಾಜದಲ್ಲಿನ ಮಹಿಳೆಯರ ಶೋಷಣೆ 'ಪೊಸ ಜೀವನ'ದ ಕತೆಗಳ ವಸ್ತು. 'ಕಡೆತ ಪಾತೆರ' ಕತೆಯಲ್ಲಿ ದಲಿತರ ಯುವಕ ಆನಂದ, ಬ್ರಾಹ್ಮಣರ ಯುವತಿ ಭಾರತಿಯನ್ನು ಪ್ರೀತಿಸಿ ಮದುವೆಯಾಗಲು ನಿರ್ಧರಿಸುತ್ತಾನೆ. ಆದರೆ ಆನಂದನ ಕೊಲೆಯಾಗುತ್ತದೆ. ಭಾರತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
 'ಕಿನ್ಯ ಕತೆಕ್ಲು' (1986), 'ಬೋಂಟೆ' (1988) ಕಥಾಸಂಕಲನಗಳ ಬಾ. ಸಾಮಗರ ಕತೆಗಳಲ್ಲಿ ಅವರದ್ದೇ ಆದ ವಿಶಿಷ್ಟ ತುಳು ಗದ್ಯ ಸೈಲಿಯಲ್ಲಿದೆ. ಅವರ ಸಾಮಾಜಿಕ ವಿಡಂಬನೆ 'ದೀರ್ಸಲೆ' ಮೆಣಸಿನಂತೆ ಖಾರವಾಗಿದೆ. ಗಂಜೀಫಾದ ಚಿಕಣಿ ಚಿತ್ರಗಳಲ್ಲಿರುವಂಥ ಕುಸುರಿ ಕೆಲಸ ಸಾಮಗರ ಕತೆಗಳಲ್ಲಿವೆ. 'ಉದಿಪು' (1987) ಹಾಗೂ ಒಸಯೊ' (1994) ಸಂಕಲನಗಳ ಮುದ್ದು ಮೂಡುಬೆಳ್ಳೆ ಗ್ರಾಮೀಣ ಬದುಕಿನ ವಿವಿಧ ಮುಖಗಳನ್ನು ಚಿತ್ರಿಸುವ ಕತೆಗಳನ್ನು ಬರೆದಿದ್ದಾರೆ. 'ಒಂಜಿ ಸಾದಿದ ಕತೆ', 'ಊರು ಮುಕರ್ುಂಡುಗೆ' - ಈ ಕತೆಗಳ ಕಥನ ತಂತ್ರದಿಂದಾಗಿ ಗಮನ ಸೆಳೆಯುತ್ತವೆ.
 'ಕರಿಯವಜ್ಜೆರೆನ ಕತೆಕುಲು' (1996) ಸಂಕಲನದ ಡಿ. ಕೆ. ಚೌಟ (ಕಾವ್ಯನಾಮ - 'ಆನಂದ ಕೃಷ್ಣ') ತುಳುವಿನ ಮಹತ್ತ್ವ ಕತೆಗಾರರಾಗಿದ್ದಾರೆ. ಕಲಿಯುವ ನೆನಪುಗಳ ರೀತಿಯಲ್ಲಿ ಬಿಚ್ಚಿಕೊಳ್ಳುವ ಇಲ್ಲಿನ ಕತೆಗಳು ಜನಪದ ಬದುಕಿನ ಬಹುರೂಪಗಳನ್ನು, ಜಾತಿಗಳ ಅಂತರ್ ಸಂಬಂಧವನ್ನು ಆತ್ಮೀಯವಾಗಿ ಚಿತ್ರಿಸುತ್ತವೆ. ಡಾ| ಪ್ರಭಾಕರ ಶಿಶಿಲ ಅವರ 'ಬಾರಣೆ' (1994) ಸಂಕಲನದ ಕತೆಗಳು ದಲಿತರ ಶೋಷಣೆಯನ್ನು ಕಲಾತ್ಮಕವಾಗಿ ಚಿತ್ರಿಸುತ್ತವೆ. ಜಯಂತಿ ಎಸ್. ಸುವರ್ಣರ 'ಮನಸ್ ಬದಲಾನಗ', ಮನೋಹರ ಪ್ರಸಾದರ 'ಬದ್ಕ್ದ ಬಂಡಿ' (1989), ಗಣೇಶ್ ಅಮೀನ್ ಸಂಕಮಾರ್ ಅವರ 'ದೋಲು' - ಇವು ಗಮನಾರ್ಹ ಕಥಾ ಸಂಕಲನಗಳು.
ಸಂಕಲನಗಳು :
 ಡಾ| ಅಮ್ಮೆಂಬಳ ಬಾಳಪ್ಪನವರ 'ತುಳುಸಿರಿ' (1971), ಎಸ್. ಆರ್. ಹರಗ್ಡೆಯವರ 'ತುಳುಕೂಟ' (1971), ಮಾಧವ ಕುಲಾಲರ 'ತುಳುವೆರೆ ಬಂಧು', ರಮೇಶ ಕಾನರ್ಾಡರ 'ತುಳುವಾಣಿ' (1973), ಕುದ್ಕಾಡಿ ವಿಶ್ವನಾಥ ರೈ ಅವರ 'ಉರಲ್', ಗಣನಾಥ ಎಕ್ಕಾರು ಅವರ 'ರಾಶಿ', ಕಲ್ಲಾಯಿ ಜಗನ್ನಾಥ ರೈ ಅವರ 'ತುಳುನಾಡ್' (1981), ಮುಂಡಪ್ಪ ಬೋಳೂರು ಅವರ 'ತುಳುವೆರೆ ಕೇದಗೆ' (1991) - ಇಂಥ ಹಳೆಯ ತುಳು ಪತ್ರಿಕೆಗಳಲ್ಲಿ, ಈಗ ಪ್ರಕಟವಾಗುತ್ತಿರುವ ಬಾ. ಸಾಮಗರ 'ತುಳುವೆರ್' (1984), ಬಿ, ಮಂಜುನಾಥರ 'ತುಳುರಾಜ್ಯ' (1985) ಪೇರೂರು ಜಾರು ಅವರ 'ತೂಟೆ' (1987), ಎಂ. ವಿಠಲ ಪುತ್ತೂರು ಅವರ 'ತುಳುವೆರೆ ತುಡರ್' (1991), ಪಿ. ಸಿ. ರಾವ್ ಅವರ 'ತುಳು ಬೊಳ್ಳಿ' (1994), ವೇದವ್ಯಾಸ ಕೋಟೆಕಾರ್ ಅವರ 'ಪೊಸಕುರಾಲ್' (1996), ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿಯ 'ಮದಿಪು' ಈ ಪತ್ರಿಕೆಗಳಲ್ಲಿ ನೂರಾರು ತುಳು ಕತೆಗಳು ಪ್ರಕಟವಾಗಿವೆ. 1976ರಲ್ಲಿ ಆರಂಭಗೊಂಡ ಮಂಗಳೂರು ಆಕಾಶವಾಣಿಯಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಕತೆಗಳು ಪ್ರಸಾರಗೊಂಡಿವೆ.
 ವಸಂತ ಕುಮಾರ್ ಪೆರ್ಲ ಅವರು ಸಂಪಾದಿಸಿರುವ 'ಆಕಾಶವಾಣಿ ತುಳುಕತೆಕುಲು' (1996) ಸಂಕಲನದಲ್ಲಿ ಇಪ್ಪತ್ತು ಕತೆಗಳಿವೆ. ಫಕೀರ್ ಮುಹಮ್ಮದ್ ಕಟ್ಪಾಡಿ ಅವರ 'ಗಡಿಹಾರ', ಅಮೃತಾ ಶೆಟ್ಟಿ ಆತ್ರಾಡಿ ಅವರ 'ಒಂಜಿ ನೆಂಪುದ ನಡುಟು', ಗೀತಾ ಸುರತ್ಕಲ್ ಅವರ 'ದೋಲು', ಬೇಬಿ ಶೆಟ್ಟಿ ನೈಮಾಡಿ ಅವರ 'ರೆಂಜಯಿದ ಮರಲಾ ಯಾನ್ಲಾ', ಬಾಬೋಜಿ ರಾವ್ ಅವರ 'ಹಕ್ಕುದಾರೆ', ಮುದ್ದು ಮೂಡುಬೆಳ್ಳೆ ಅವರ 'ಬೀಮಾಬಿರು', ನಾ. ಉಜಿರೆ ಅವರ 'ಮಿಲ್ಟ್ರಿ ತ್ಯಾಂಪಣ್ಣೆ', ಪಾ. ಸಂಜೀವ ಬೋಳಾರ ಅವರ 'ಕತೆತ ನಡುಟೊಂಜಿ ಕತೆ' - ಈ ಕತೆಗಳು ವಸ್ತು ವೈವಿಧ್ಯ ಹಾಗೂ ಕಸುಬುಗಾರಿಕೆಯಿಂದ ಗಮನಾರ್ಹವಾಗಿದೆ.


TULU NOVEL

ತುಳು ಕಾದಂಬರಿ

ಮುರಳೀಧರ ಉಪಾಧ್ಯ ಹಿರಿಯಡಕ

 ಪೊಳಲಿ ಶೀನಪ್ಪ ಹೆಗ್ಡೆಯವರ 'ಮಿತ್ಯ ನಾರಾಯಣ ಕತೆ', 'ವೆಲ್ಲೂರಿನ ಜೈಲಿನಲ್ಲಿ ಹುಟ್ಟಿದ ತುಳು ಕಾದಂಬರಿ. ಶೀನಪ್ಪ ಹೆಗ್ಡೆಯವರು (1935) ಈ ಕಾದಂಬರಿಯಲ್ಲಿ ಪುರಾಣ, ಚರಿತ್ರೆ ಹಾಗೂ ತನ್ನ ಕಾಲವನ್ನು ಬೆಸೆದಿದ್ದಾರೆ. ಈ ಕಾದಂಬರಿ ನಮ್ಮ ಅಪನಂಬಿಕೆಗಳನ್ನು ಅಮಾನತ್ತಿನಲ್ಲಿಟ್ಟು ಮುಂದಕ್ಕೆ ಕರೆದೊಯ್ಯುತ್ತದೆ. ಇದು ಒಂದು ಶಿಥಿಲ ಬಂಧದ, ಪ್ರಾದೇಶಿಕ, ಐತಿಹಾಸಿಕ ಕಾದಂಬರಿ. ತುಳುನಾಡಿನ ಸಂಸ್ಕೃತಿಯ ಹಲವಾರು ಮುಖಗಳನ್ನು ತೋರಿಸುವುದು ಶೀನಪ್ಪ ಹೆಗ್ಡೆಯವರ ಉದ್ದೇಶ. ವಿಷ್ಣುಶರ್ಮನ 'ಪಂಚತಂತ್ರ'ದಲ್ಲಿ 'ನೇಕಾರ ನಾರಾಯಣ ಆದ ಕತೆ' ಈ ಕೃತಿಗೆ ಪ್ರೇರಣೆ ನೀಡಿದೆ. 'ಪಂಚತಂತ್ರ'ದ ನೇಕಾರ, ಈ ಕೃತಿಯಲ್ಲಿ ನಾರಾಯಣ ಭಟ್ಟನಾಗಿದ್ದಾನೆ. ಈ ಲೋಕದಲ್ಲಿ ಮನುಷ್ಯನಿಂದ ಆಗದೇ ಇರುವುದು ಯಾವುದೂ ಇಲ್ಲ ಎಂಬುದು 'ಪಂಚತಂತ್ರ' ಕತೆಯ ನೀತಿ. ಶೀನಪ್ಪ ಹೆಗ್ಡೆಯವರ ಕಾದಂಬರಿಯಲ್ಲಿ ಸತ್ಯನಾರಾಯಣ ದೇವರು 'ಮಿತ್ಯನಾರಾಯಣ'ನಿಗೆ ಶಿಕ್ಷೆ ಕೊಡುತ್ತಾನೆ. ಅವರು ಹೇಳುವಂತೆ, 'ಸುಳ್ಳು, ಕಪಟ, ಮೋಸದಿಂದ ಎಷ್ಟು ಸಿರಿವಂತಿಕೆ ಬಂದರೂ, ದೇವರು ಅದರ ಫಲವನ್ನು ಅವನಿಗೆ ಕೊಡುತ್ತಾನೆ. ಶೀನಪ್ಪ ಹೆಗ್ಡೆಯವರ ಲೊಟ್ಟೆ ಹೊಡೆಯುವ ನಾರಾಯಣನನ್ನು, ಲೊಟ್ಟೆಯನ್ನು ಸತ್ಯವೆಂದು ನಂಬುವವರನ್ನು ಒಟ್ಟಿಗೆ ತಮಾಷೆ ಮಾಡುತ್ತಾರೆ.
 ಶೀನಪ್ಪ ಹೆಗ್ಡೆಯವರ ಈ ಕಾದಂಬರಿಯಲ್ಲಿ ತುಳುನಾಡಿನ ಜಾತ್ರೆಗಳು, ಸಂತೆಗಳು, ಒಡವೆಗಳು, ಚಿನ್ನಾಭರಣ, ಆಟ, ನಾಗಪೂಜೆ, ಅರಮನೆಯ ದಬರ್ಾರು - ಹೀಗೆ ತುಳುನಾಡಿನ ಚೆಲುವು ತುಂಬಿದೆ. ಹದಿನೈದನೆಯ ಶತಮಾನದ ತುಳುನಾಡಿನ ಬದುಕಿನ ಚಿತ್ರಣವಿರುವ ಈ ಕಾದಂಬರಿಯಲ್ಲಿ ಬ್ರಾಹ್ಮಣ ಯುವಕನೊಬ್ಬ ಜೈನ ಅರಸುಮನೆತನದ ಹೆಣ್ಣನ್ನು ಗಾಂಧರ್ವ ವಿವಾಹವಾಗುವ ಚಿತ್ರಣವಿದೆ. ಅರಮನೆಯ ರಾತ್ರಿಯ ಗುಟ್ಟುಗಳ ಬಗ್ಗೆ, ದೇವಸ್ಥಾನದ ಜಾತ್ರಯ ಬಗ್ಗೆ ಬರೆಯುವ ಹೆಗ್ಡೆಯವರು ತುಳುನಾಡಿನ ಭೂತಸ್ಥಾನ ಸಂಸ್ಕೃತಿಯ ಬಡವರನ್ನು ಮರೆಯುವುದಿಲ್ಲ. ಅರಸರ ಜಾತಿ ರಾಜಕೀಯದಿಂದಾಗಿ ಬಡವರಿಗಾಗುವ ಅನ್ಯಾಯಗಳ ವಿವರವೂ ಈ ಕೃತಿಯಲ್ಲಿದೆ. ಶೀನಪ್ಪ ಹೆಗ್ಡೆಯವರ ಶೈಲಿಯಲ್ಲಿ ತುಳುನಾಡಿನ ವಯ್ಯಾರ, ಗತ್ತ್ತುಗಳನ್ನು ಹಿಡಿಯುವ ತಾಕತ್ತಿದೆ. ಈ ಕಾದಂಬರಿಯಲ್ಲಿ ಅವರು ಅಲ್ಲಲ್ಲಿ ಜೈನರ ತುಳುವನ್ನು ಬಳಸಿದ್ದಾರೆ. ಶೀನಪ್ಪ ಹೆಗ್ಡೆಯವರು ತುಳುನಾಡಿನ ದುಭಾಷಿ ಸಾಹಿತಿಗಳಾಗಿದ್ದರು. ಅವರು ತನ್ನ ಇತಿಹಾಸ ಗ್ರಂಥಗಳನ್ನು ('ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ ಮತ್ತು ಭೂತಾಳ ಪಾಂಡ್ಯರಾಯನ ಅಳಿಯಕಟ್ಟು' - 1915). 'ಪ್ರಾಚೀನ ತುಳುನಾಡು' (ಎನ್. ಎಸ್. ಕಿಲ್ಲೆಯವರ ಜತೆಯಲ್ಲಿ - 1954) ಕನ್ನಡದಲ್ಲಿ ಬರೆದರು. ಕಾದಂಬರಿಯನ್ನು ತುಳುವಿನಲ್ಲಿ ಬರೆದರು.
 ಎಸ್. ಯು. ಪಣಿಯಾಡಿ (ಶ್ರೀನಿವಾಸ ಉಪಾಧ್ಯ ಪಣಿಯಾಡಿ, 1907-1959) ಅವರು ತಾನು 1921ರಲ್ಲಿ ಬರೆದ 'ಸತೀ ಕಮಲೆ'ಯನ್ನು 1936ರಲ್ಲಿ ತನ್ನ 'ತುಳುವ ಸಾಹಿತ್ಯ ಮಾಲೆ'ಯಲ್ಲಿ ಪ್ರಕಟಿಸಿದರು. ಸ್ವಾತಂತ್ರ್ಯ ಚಳುವಳಿಯ ಹಿನ್ನೆಲೆಯಲ್ಲಿ ಬರೆದ ಈ ಕಾದಂಬರಿಯಲ್ಲಿ ಗಾಂಧೀಜಿಯ ವಿಚಾರಧಾರೆಯ ದಟ್ಟ ಪ್ರಭಾವವಿದೆ. ಮದುವೆಯ ವ್ಯವಸ್ಥೆಯ ಹೊರಗಿನ ಲೈಂಗಿಕ ಸಂಬಂಧಗಳಿಗೆ ಒಪ್ಪಿಗೆ ಇಲ್ಲದಿರುವುದು, ಸ್ವದೇಶಿ ಚಳುವಳಿಯಲ್ಲಿ ಮಹಿಳೆಯರ ಪಾತ್ರ - ಇಲ್ಲೆಲ್ಲ ಗಾಂಧೀಜಿಯ ಚಿಂತನೆಯನ್ನು ಗುರುತಿಸಬಹುದು. ಪಣಿಯಾಡಿಯವರು ಈ ಕಾದಂಬರಿಯನ್ನು ಶಿವಳ್ಳಿ ಬ್ರಾಹ್ಮಣರ ತುಳುವಿನಲ್ಲಿ ಬರೆದಿದ್ದಾರೆ. 'ಸತೀ ಕಮಲೆ' ಒಂದು ಸಾಧಾರಣ ಕಾದಂಬರಿ. ತುಳು ಚಳುವಳಿಯನ್ನು ಆರಂಭಿಸ ಹೊರಟ ಯುವಕನೊಬ್ಬ ಕನಸುಗಳು ಈ ಕಾದಂಬರಿಯಲ್ಲಿವೆ1.
ಗನ್ನು  ಹಿಡಿದು ಹುಲಿಬೇಟೆಯಾಡುತ್ತಿದ್ದ ಕೆದಂಬಾಡಿ ಜತ್ತಪ್ಪ ರೈಗಳು ಗನ್ನು ಬಿಟ್ಟು ಪೆನ್ನು ಹಿಡಿದರು. ಇದರಿಂದ ಕಾಡಿಗೂ ಒಳ್ಳೆಯದಾಯಿತು. ತುಳುನಾಡಿಗೂ ಲಾಭ ವಾಯಿತು. ರೈಗಳು ತುಳುವಿನಲ್ಲಿ ಬರೆದಿರುವ ಶಿವರಾಮ ಕಾರಂತರ 'ಚೋಮನ ದುಡಿ', ನಿರಂಜನರ 'ಚಿರಸ್ಮರಣೆ' ಕಾದಂಬರಿಗಳಿಗೆ ತುಳು ಸಾಹಿತ್ಯದಲ್ಲಿ ಮಹತ್ತ್ವದ ಸ್ಥಾನವಿದೆ. ಚೋಮ ತುಳು ಮಾತನಾಡುವ ಚಂದ ನೋಡಲಿಕ್ಕಾಗಿಯೇ, ತುಳು ಚೋಮನ ದುಡಿ'ಯನ್ನು ಓದಬೇಕು. ಈಗ ಚಲಾವಣೆಯಲ್ಲಿಲ್ಲದ ಅನೇಕ ತುಳು ಶಬ್ದಗಳಿಗೆ ರೈಗಳು ಪುನರ್ಜನ್ಮ ನೀಡುತ್ತಾರೆ. ಕೆದಂಬಾಡಿಯವರದ್ದು ಅಲಿಖಿತ ಪರಂಪರೆಯ ದೊಡ್ಡ ಪ್ರತಿಭೆ. ಆದ್ದರಿಂದ ಅವರು ಅನುವಾದ ಮಾಡುವಾಗ ಅನುವಾದದ ಬೇಲಿಯನ್ನು ದಾಟಿ ರೂಪಾಂತರದ ಮಾರ್ಗ ಹಿಡಿಯುತ್ತಾರೆ. ಕಾರಂತರ ಹಾಗೂ ನಿರಂಜನರ ಕಾದಂಬರಿಗಳಿಗೆ ರೈಗಳು ತುಳುನಾಡಿನ ಪ್ರಾದೇಶಿಕ ರಂಗು ನೀಡಿದ್ದಾರೆ. ತನ್ನ ಬೇಟೆಯ ಸಾಹಿತ್ಯವನ್ನು ಕನ್ನಡದಲ್ಲಿ ಬರೆದಿರುವ ರೈಗಳು ಬೇರೆಯವರ ಕನ್ನಡ ಕೃತಿಗಳನ್ನು ತುಳುವಿಗೆ ಭಾಷಾಂತರ ಮಾಡಿದ್ದಾರೆ.
ಮಹಾಲಿಂಗ ಅವರ 'ನಾಣಜ್ಜೆರ್ ಸುದೆ ತಿಗರ್ಾಯೆರ್' (1994) ಎಂಬತ್ತೆಂಟು ಪುಟಗಳ ಕಿರು ಕಾದಂಬರಿ - ಸ್ವಾತಂತ್ರ್ಯ ಪೂರ್ವದ ತುಳುನಾಡಿನ 'ಕುದ್ರೆಮೂಲೆ' ಎಂಬ ಹಳ್ಳಿ ಈ ಕಾದಂಬರಿಯ ಕ್ರಿಯಾಕೇಂದ್ರ. ಬಡತನದಲ್ಲಿ ಪ್ರೇತಭಟ್ಟನಾಗಿದ್ದ, ಅಡುಗೆ ಭಟ್ಟನಾಗಿದ್ದ ನಾಣಪ್ಪಯ್ಯ ಸ್ವಜಾತಿಯವಳಲ್ಲದ ಸರಸಕ್ಕನನ್ನು ಮದುಯೆಯಾಗಿ, ಬೇಸಾಯಗಾರನಾಗಿ ಕುದ್ರೆಮೂಲೆಯಲ್ಲಿ ನೆಲೆಸಿದ್ದಾರೆ. ಅವರು ಯಕ್ಷಗಾನದ ಅದ್ಭುತ ಪ್ರದರ್ಶನಗಳಲ್ಲಿ, ಗೊಂಬೆಯಾಟದ ಕೈಚಳಕದಲ್ಲಿ ಸಿದ್ಧಹಸ್ತರು, ಹಠಮಾರಿತನದಲ್ಲಿ ಪ್ರಸಿದ್ಧರು. ನಾಣಜ್ಜ ಹೊಳೆಯ ದಾರಿ ಬದಲಾಯಿಸುವ ಕನಸು ಕಂಡು ಕಾರ್ಯಪ್ರವೃತ್ತರಾಗಿರುವುದು ಈ ಕಾದಂಬರಿಯ ಮುಖ್ಯ ಘಟನೆ. ನಾಣಜ್ಜನ ಪ್ರಯತ್ನ ಎರಡು ದಿನದ ಮಟ್ಟಿಗೆ ಯಶಸ್ವಿಯಾಗುತ್ತದೆ; ಹೊಳೆ ದಾರಿ ಬದಲಾಯಿಸುತ್ತದೆ. ಆದರೆ ಗುಡ್ಡ ಜರಿದು, ಅಣೆಕಟ್ಟು ಬಿರಿದು, ಹೊಳೆ ಹಳೆಯ ದಾರಿ ಹಿಡಿದಾಗ ನಾಣಜ್ಜ ಸೋಲೊಪ್ಪಿಕೊಂಡು ಊರು ಬಿಡುತ್ತಾರೆ. ದೇವರುಗಳನ್ನೂ ಬಿಡದ ಜಾತಿಯ ಏಣಿ ಶ್ರೇಣಿಯ ವ್ಯವಸ್ಥೆ, ಧನಿ-ಒಕ್ಕಲು ಪದ್ಧತಿಯ ಅನಿಷ್ಟಗಳು ಇಲ್ಲಿ ಚಿತ್ರಣಗೊಂಡಿವೆ. ಮಹಾಲಿಂಗರ ಶೈಲಿಯಲ್ಲಿ ಕಾವ್ಯ ಸ್ಪರ್ಶಕ್ಕಿಂತ ಹಾಸ್ಯಸ್ಪರ್ಶ ಜಾಸ್ತಿ. ಈ ತುಳು ಕಾದಂಬರಿಯಲ್ಲಿ ಪ್ರಾದೇಶಿಕತೆ, ಉಗ್ರ ರಾಷ್ಟ್ರೀಯತೆಗೆ ತನ್ನದೇ ರೀತಿಯಲ್ಲಿ ಉತ್ತರ ಕೊಡುತ್ತದೆ ಅನ್ನಿಸುತ್ತದೆ. ಇಲ್ಲಿ ಭಾರತ, ಮದ್ರಾಸು ಸಂಸ್ಥಾನ, ಕನರ್ಾಟಕ ರಾಜ್ಯ ಇವುಗಳ ನೆರಳೂ ಕಾಣಿಸುವುದಿಲ್ಲ. ಇಲ್ಲಿರುವುದು 'ಎಲ್ಲದರಲ್ಲೂ ಒಂದು ಸಂಗೀತ ಬೇಕು' ಎನ್ನುವ ಕನಸುಗಾರ 'ನಾಣಜ್ಜ' ಯಕ್ಷಗಾನದ ಅದ್ಭುತ ಲೋಕ ಮತ್ತು ಹೊಳೆ.
'ಕುದುರುದ ಕೇದಗೆ' (1994) ಎಂ. ಜಾನಕಿ ಬ್ರಹ್ಮಾವರ ಅವರ ಚೊಚ್ಚಲ ತುಳು ಕಾದಂಬರಿ. ತುಳುನಾಡಿನ ಹಳ್ಳಿಯೊಂದರ ದಲಿತರ ಅಸಹಾಯಕತೆಯನ್ನು ಅನಾವರಣಗೊಳಿಸುವ ಈ ಕಾದಂಬರಿಯು ತನ್ನ ಕಲಾತ್ಮಕ ಕುಸುರಿ ಕೆಲಸದಿಂದ ಗಮನ ಸೆಳೆಯುತ್ತದೆ. ಗ್ರಾಮೀಣ ಸಮಾಜದ ದಲಿತರ ಸ್ಥಿತಗತಿ 'ಕುದುರುದ ಕೇದಗೆ'ಯ ದೃಷ್ಟಿಕೇಂದ್ರವಾಗಿದೆ. ಬಿಲ್ಲವ ಜಾತಿಯ ಯುವಕ ಶಂಕರನಿಗೆ ದಲಿತರ ಕುರಿತು ಪ್ರಾಮಾಣಿಕವಾದ ಸಹಾನುಭೂತಿ ಇದೆ. ದಲಿತ ವಾಸುವಿನ ಹೆಣ ಹೊರಲು ಶಂಕರನ ಸ್ವಜಾತಿಯವರು ನಿರಾಕರಿಸುತ್ತಾರೆ. ವಾಸುವಿನ ಸಾವಿಗೆ ದಲಿತರ ಮೂಢನಂಬಿಕೆಯೂ ಕಾರಣವಾಗಿದೆ. ಯಕ್ಷಗಾನ ಪ್ರದರ್ಶನದಂದು ನಡೆಯುವ ಗೂಂಡಾಗಳ ಆಕ್ರಮಣ, ದಲಿತ ಯುವತಿ ಕುಸುಮಳ ಅಪಹರಣ, ಗರೋಡಿಯ ಕಾಣಿಕೆ ಡಬ್ಬಿಯಿಂದ ಕಳುವು - ಇವು ಹಳ್ಳಿಯ ಅವನತಿಯನ್ನು ಸೂಚಿಸುತ್ತವೆ. ವ್ಯವಸ್ಥೆಯ ಪ್ರತಿನಿಧಿಗಳಾಗಿರುವ ಪೋಲಿಸರು, ಗರೋಡಿಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕಮಲಕ್ಕನ 'ಪೋಸ್ಟ್ ಮಾರ್ಟಮ್' ಮಾಡಿಸುತ್ತಾರೆ. ಆದರೆ ಅವರು ಕುಸುಮಳನ್ನು ಪತ್ತೆಹಚ್ಚರೆಂಬ ಭರವಸೆ ಇಲ್ಲ. ದಲಿತ ಐತ, ಅಸಹಾಯಕನಾಗಿ ಊರು ಬಿಟ್ಟು ಹೋಗುತ್ತಾನೆ. ಕಾದಂಬರಿಯ ನಾಯಕ ಶಂಕರನ ದೃಷ್ಟಿಕೋನದ ತಂತ್ರವಿರುವ ಈ ಕೃತಿಯಲ್ಲಿ ಹಲವು ಧ್ವನಿಪೂರ್ಣ, ಸಾಂಕೇತಿಕ ವಿವರಗಳಿವೆ. ಕುಸುಮಳ ಅಪಹರಣವನ್ನು ಸೂಚಿಸುವ ಹದ್ದು - ಕೋಳಿಮರಿಯ ಸಂಕೇತ ಒಂದು ಒಳ್ಳೆಯ ಉದಾಹರಣೆ. ಎಂ. ಜಾನಕಿ ಅವರ 'ಕಪ್ಪುಗಿಡಿ' ಭೂಸುಧಾರಣೆಯಿಂದ ಉಂಟಾದ ಸಾಮಾಜಿಕ ಪರಿವರ್ತನೆಯನ್ನು ಧ್ವನಿಪೂರ್ಣವಾಗಿ (1988) ಚಿತ್ರಿಸುತ್ತದೆ.
ಸಂಕಲ ಕರಿಯ ಕೃಷ್ಣಸಾಲ್ಯಾನ್ರ 'ಚಂದ್ರಳ್ಳಿಡ್ ಬೊಳ್ಪಾಂಡ್', ಜಿತು ನಿಡ್ಲೆಯವರ 'ಮೂಜಂಜ ಆನಗ', ಮಾಧವ ಪೆರಾಜೆ ಅವರ 'ನಿಲೆ', ಕೆ. ಟಿ. ಗಟ್ಟಿ ಅವರ 'ಬೊಂಬಾಯಿದ ಇಲ್ಲ್', ಕುದ್ಕಾಡಿ ವಿಶ್ವನಾಥ ರೈ ಅವರ 'ಲೆಕ್ಕಸಿರಿ' (1994), ಪ. ರಾಮಕೃಷ್ಣ ಶಾಸ್ತ್ರಿಯವರ 'ಪುದ್ವಾರು' (1988), ಕಾತ್ಯಾಯಿನಿ ಕುಂಜಿಬೆಟ್ಟು - 'ಕಬರ್ಗತ್ತಲೆ' (2007) - ಇವು ಗಮನಾರ್ಹ ತುಳು ಕಾದಂಬರಿಗಳು. (ಡಿ. ಕೆ. ಚೌಟ ಅವರ 'ಮಿತ್ತ ಬೈಲ್ ಯಮುನಕ್ಕೆ', ಕಾತ್ಯಾಯಿನಿ ಕುಂಜಿಬೆಟ್ಟು ಅವರ 'ಕಬರ್ಗತ್ತಲೆ' ಕಾದಂಬರಿಗಳನ್ನು ಕುರಿತು ಈ ಬ್ಲಾಗ್ನಲ್ಲಿ ಪ್ರತ್ಯೇಕ ಲೇಖನಗಳು ಪ್ರಕಟವಾಗಲಿವೆ.)



TULU LITRETURE

                         ತುಳು ಸಾಹಿತ್ಯ
                       
ಮುರಳೀಧರ ಉಪಾಧ್ಯ ಹಿರಿಯಡಕ

             ಸಂಸ್ಕೃತ ಕವಿ ಹಾಗೂ ಕನ್ನಡ ಕೀರ್ತನಕಾರರಾಗಿದ್ದ ಉಡುಪಿಯ ಸೋದೆ ಮಠದ ವಾದಿರಾಜ ಸ್ವಾಮಿಗಳು (1480-1600) ಬರೆದ ದಶಾವತಾರದ ಹಾಡು 'ತುಳುವಿನ ಲಿಖಿತ ಸಾಹಿತ್ಯದ ಪ್ರಾಚೀನ ಲಭ್ಯ ದಾಖಲೆಗಳಲ್ಲೊಂದು. 'ತುಳುವಿನಲ್ಲಿ ಲವಲೇಶವಾದರೂ ಸಾಹಿತ್ಯವಿಲ್ಲ' ಎಂದು ಎಂ. ಗೋವಿಂದ ಪೈಗಳು 1923ರಲ್ಲಿ ಬರೆದರು. ಕ್ಷೇತ್ರಕಾರ್ಯದಲ್ಲಿ ಅನಾಸಕ್ತರಾಗಿದ್ದ ಸಂಶೋಧಕ ಪೈಗಳಿಗೆ ತನ್ನ ಕಾಸರಗೋಡು ತಾಲೂಕಿನಲ್ಲೆ ಇದ್ದ ಪ್ರಾಚೀನ ತುಳು ಕಾವ್ಯಗಳು ಕಾಣಿಸಿಲ್ಲ. ತುಳು ಕವಿ, ಸಂಶೋಧಕ ವೆಂಕಟರಾಜ ಪುಣಿಂಚತ್ತಾಯರು ಇತ್ತೀಚೆಗೆ ತುಳುವಿನ ಕೆಲವು ಪ್ರಾಚೀನ ಗ್ರಂಥಗಳನ್ನು ಶೋಧಿಸಿ, ಸಂಪಾದಿಸಿದ್ದಾರೆ.
 ವಿಷ್ಣುತುಂಗವ 'ಶ್ರೀ ಭಾಗವತೊ' (1984) ಸುಮಾರು ಹದಿನೇಳನೆಯ ಶತಮಾನದ ಕೃತಿ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ತುಳು ಭಾಷೆಯ ಹಳೆಯ ರೂಪದ ಅಭಿನಯಕ್ಕೆ ಅಮೂಲ್ಯ ಆಕರ ಗ್ರಂಥವಾಗಿರುವ ಈ ಕಾವ್ಯದ ಬರೇ ಮೂರು ಸ್ಕಂಧಗಳು (ಎರಡು ಸಾವಿರ ಪದ್ಯಗಳು) ಸಿಕ್ಕಿವೆ. ಬಹುಶಃ ಹದಿನೇಳನೆಯ ಶತಮಾನದ ರಚನೆಯಾಗಿರುವ ಇನ್ನೊಂದು ತುಳು ಕಾವ್ಯ - 'ಕಾವೇರಿ' (1987). ಇದರ ಪೂರ್ಣ ಪಾಠ ಸಿಕ್ಕಿಲ್ಲ. ಮೂರನೆಯ ಒಂದು ಭಾಗ ಮಾತ್ರ ಲಭ್ಯವಾಗಿದೆ. 'ಸ್ಕಂಧಪುರಾಣ'ದ ಕಾವೇರಿ ನದಿಯ ಕತೆಯನ್ನು ನಿರೂಪಿಸುವ ಈ ಕಾವ್ಯ/ಕವಿ ಯಾರೆಂದು ಗೊತ್ತಾಗಿಲ್ಲ. 'ಕಾವೇರಿ'ಯ ಕವಿ ಕುಮಾರವ್ಯಾಸನಿಂದ ಪ್ರಭಾವಿತನಾಗಿದ್ದಾನೆ. ತೆಂಕಿಲ್ಲಾಯ ಎಂಬ ಕುಲನಾಮದ ಲೇಖಕ ಬರೆದಿರುವ 'ತುಳು ದೇವೀ ಮಹಾತ್ಮೆ' ತುಳುವಿನ ಪ್ರಾಚೀನ ಗದ್ಯ ಕೃತಿ. 'ಶ್ರೀ ಭಾಗವತೊ', 'ಕಾವೇರಿ', 'ದೇವಿ ಮಹಾತ್ಮೆ' ಈ ಮೂರು ಕೃತಿಗಳು ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಯಲ್ಲಿ ಲಭ್ಯವಾಗಿದೆ. ಸಂಶೋಧಕ ಪುಣಿಂಚಿತ್ತಾಯರು ಊಹಿಸಿರುವಂತೆ, 'ತೌಳವಾಧೀಶರೆಂದೇ  ಬಿರುದು ಧರಿಸಿರುವ ಕುಂಬಳೆ ಅರಸರು, ತುಳು ಕವಿಗಳಿಗೆ, ತುಳು ಬರಹಗಾರರಿಗೆ ಪ್ರೋತ್ಸಾಹ ನೀಡಿರಬಹುದು'.
ಪಾಡ್ದನಗಳು ತುಳುನಾಡಿನ ಭೂತಾರಾಧನೆಯ ಸಂದರ್ಭದಲ್ಲಿ ವಿಧಿವತ್ತಾಗಿಯೂ, ಇತರ ಸಂದರ್ಭಗಳಲ್ಲಿ ಹವ್ಯಾಸಕ್ಕಾಗಿಯೂ ನಿರೂಪಿಸಿರುವ ಜನಪದ ಕಥನಕವನಗಳು. ತುಳುನಾಡಿನ ಭೂತಗಳ ಸಂಖ್ಯೆ ಸುಮಾರು ನಾಲ್ನೂರು ಹೆಚ್ಚಿನ ಭೂತಗಳಿಗೆ ಸಂಬಂಧಪಟ್ಟ ಪಾಡ್ದನಗಳು ಲಭ್ಯವಿವೆ. ಪಾಡ್ದನಗಳ ರಚನೆಯ ಕಾಲ ಹದಿನೈದರಿಂದ ಹದಿನೇಳನೆಯ ಶತಮಾನವೆಂದು ವಿದ್ವಾಂಸರು ತೀಮರ್ಾನಿಸಿದ್ದಾರೆ. ರೆ| ಎ. ಮೇನರ್ ಅವರ 'ತುಳು ಪಾಡ್ದನಗಳು' (1886) ಗ್ರಂಥದಲ್ಲಿ ಇಪ್ಪತ್ತೊಂದು ಪಾಡ್ದನಗಳಿವೆ. ಕನರಾಡಿ ವಾದಿರಾಜ ಭಟ್ಟರು ಸಂಪಾದಿಸಿದ 'ಪಾಡ್ದನಗಳು' (1974) ಒಂದು ಅಸಾಧಾರಣ ಸಂಕಲನ. ಅಮೃತ ಸೋಮೇಶ್ವರ ಅವರು ಸಂಪಾದಿಸಿರುವ 'ತುಳು ಪಾಡ್ದನ ಸಂಪುಟ'ದಲ್ಲಿ (1997) ಹದಿನಾರು ತುಳು ಪಾಡ್ದನಗಳು ಹಾಗೂ ಅವುಗಳ ಕನ್ನಡ ಭಾಷಾಂತರಗಳಿವೆ. ಕೆಲವು ಪಾಡ್ದನಗಳಲ್ಲಿ ಭೂತಗಳಿಗೆ ಹಾಗೂ ಪೌರಾಣಿಕ ವ್ಯಕ್ತಿಗಳಿಗೆ ಸಂಬಂಧಿಸಿದ ಅತಿಮಾನುಷ ವಸ್ತುಗಳಿವೆ. ಮಾನವರಾಗಿದ್ದು ಭೂತತ್ತ್ವವನ್ನು ಹೊಂದಿದ ವ್ಯಕ್ತಿಗಳ ಕುರಿತಾದ ಹಲವು ಪಾಡ್ದಗಳಿವೆ. ಇನ್ನೂ ಕೆಲವು ಲೌಕಿಕ ವಸ್ತುಗಳುಳ್ಳ  ಪಾಡ್ದನಗಳಿವೆ.
ಕಾಡು ಹಂದಿ, ತುಳುನಾಡಿನ 'ಪಂಜುಲರ್ಿ' (ಪಂಜಿಕುಳರ್ೆ = ಹಂದಿ ಪಿಳ್ಳೆ) ದೈವವಾಗಿದೆ. ಪಂಜುಳರ್ಿಯ ತಂದೆ ತಾಯಿ ಮೊದಲ ಅಣ್ಣತಂಗಿಯರಾಗಿದ್ದು ಅನಂತರ ದಂಪತಿಗಳಾದ ಕತೆ ಮಾನವಶಾಸ್ತ್ರದ ನೆಲೆಯಿಂದ ಕುತೂಹಲಕಾರಿಯಾಗಿದೆ. ಧೂಮಾವತಿಯ ಆರಾಧನೆ 'ಜುಮಾದಿ' ಎಂಬ ಹೆಸರಿನಲ್ಲಿ ನಡೆಯುತ್ತದೆ. 'ಬಾಮಕುಮಾರ'ನ ಕತೆ ಗಣಪತಿಯ ಕತೆಯ ಪಾಠಾಂತರದಂತಿದೆ. ಈಶ್ವರನಿಗೆ ಶರಣಾದ ಅಸುರನನ್ನು ಬಾಮಕುಮಾರ ಕೊಲ್ಲುತ್ತಾನೆ. ಇದರಿಂದ ಕೆರಳಿ ಕೆಂಡವಾದ ಈಶ್ವರ ಬಾಮಕುಮಾರನ ತಲೆ ಕಡಿಯುತ್ತಾನೆ. 'ಬಲಿಯೇಂದ್ರ' ಪಾಡ್ದನದಲ್ಲಿ ಮಹಾಪರಂಪರೆ ಹಾಗೂ ಕಿರುಪರಂಪರೆಗಳ ಮುಖಾಮುಖಿಯನ್ನು ಕಾಣುತ್ತೇವೆ.
ಅಹಿಂಸೆಯ ಸಂದೇಶ ನೀಡಿದ ಗೊಮ್ಮಟ ಸ್ವಾಮಿಯ ಮೂತರ್ಿ ರಚಿಸಿದ ಶಿಲ್ಪಿ ಬೀರ ಕಲ್ಕುಡ ಅವನ ರಾಜನಿಂದ ಅನುಭವಿಸಿದ ಹಿಂಸೆ, ಬೀರ ಕಲ್ಕುಡ ಮತ್ತು ಕಲ್ಲುಟರ್ಿಯ ಪ್ರತೀಕಾರ - 'ಬೀರ ಕಲ್ಕುಡ' ಪಾಡ್ದನದ ವಸ್ತು. ದೈವದ ಗುಡಿಯ ಮಾಡಿಗೆ ಹತ್ತಿ ಸಮೀಪದ ಮರದ ಹಣ್ಣನ್ನು ಕಿತ್ತ 'ಕೊರಗತನಿಯು' ಮಾಯಕಗೊಳ್ಳುತ್ತಾನೆ. 'ಸತ್ಯನಾವುರದ ಸಿರಿ' ತನ್ನ ಹೊಣೆಗೇಡಿಯಾದ ವ್ಯಭಿಚಾರಿ ಗಂಡನನ್ನು ಧಿಕ್ಕರಿಸಿ ಮರುಮದುವೆಯಾಗುತ್ತಾಳೆ, ಕಾರಣಿಕದ ಸತಿಯಾಗುತ್ತಾಳೆ. (ಅಮೃತ ಸೋಮೇಶ್ವರ ಅವರು ಸಂಪಾದಿಸಿದ 'ತುಳು ಪಾಡ್ದನ ಸಂಪುಟ', ಎ. ವಿ. ನಾವುಡರು ಸಂಪಾದಿಸಿರುವ, 'ಗಿಡಕೆರೆ ರಾಮಕ್ಕ ಮುಗ್ಗೇರ್ತಿ ಕಟ್ಟಿದ ಸಿರಿ ಪಾಡ್ದನ' (1999), ಲಾರಿ-ಹೊಂಕೊ ಅವರು ಸಂಪಾದಿಸಿರುವ 'ಸಿರಿ ಎಪಿಕ್ ಪರ್ಫಾರ್ಮ್ಡ್ ಬೈ ಗೋಪಾಲ ನಾಯ್ಕ' (1999), ಈ ಗ್ರಂಥದಲ್ಲಿ 'ಸಿರಿ ಪಾಡ್ದನ'ದ ಮೂರು ವಿಭಿನ್ನ ಪಠ್ಯಗಳು ಸಿಗುತ್ತವೆ. 'ಕೋಟೆದ ಬಬ್ಬು ಬಾರಗೆ' ಪಾಡ್ದನದಲ್ಲಿ ಮುಂಡಾಲರ ಪ್ರತಿಭಾವಂತ ಯುವಕ ಕೋಡದಬ್ಬು, ಮೇರವರ್ಗದ ತನ್ನಿ ಮಾನಿಗ ಅಣ್ಣ-ತಂಗಿಯರಂತೆ ಬಾಳುತ್ತಾರೆ; ಕಾರಣಾಂತರಗಳಿಂದ ಮಾಯಕವಾಗಿ ದೈವಗಳಾಗುತ್ತಾರೆ. 'ಪೆರಿಂಜಗತ್ತು ದೇವಪೂಂಜ' ಪರಾಕ್ರಮಿಯಾಗಿದ್ದರೂ, ಅಹಂಕಾರ, ಉದ್ಧಟತನ, ಕ್ರೌರ್ಯಗಳಿಂದ ದುರಂತದತ್ತ ಸಾಗುತ್ತಾನೆ. 'ಕೊಲ್ಲೂರ ಮುಕಾಂಬಿ' ಪಾಡ್ದನದಲ್ಲಿ ವಿವಾಹಿತೆ ಮುಕಾಂಬಿ, ಕಡಂಬಾರ ಮಯ್ಯನಿಂದ ಅತ್ಯಾಚಾರಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. 'ಹೊನ್ನಮ್ಮ ಜೇವು' ಮಾಲಿಂಗ ಸೆಟ್ಟಿಯ ಮಡದಿ. ಪುತ್ತೂರ ಜಾಗಣಂತೋಡನೆಂಬ ಶ್ರೀಮಂತನ ಜಾಲಕ್ಕೆ ಸಿಲುಕಿದ ಅವಳನ್ನು ಮಾಲಿಂಗ ಸೆಟ್ಟಿ ಕೊಲ್ಲುತ್ತಾನೆ. 'ಮದನಗ' ಪಾಡ್ದನದಲ್ಲಿ ಬಲಾತ್ಕಾರಕ್ಕೊಳಗಾದ ನಿರಪರಾಧಿ ಹೆಣ್ಣಿನ ಕತೆಯಿದೆ, ತುಳು ಪಾಡ್ದನ ಕತೆಗಳಿಗೆ ಯಾವ ರೀತಿ ಹೊಸ ರೂಪ ಕೊಡಬಹುದೆಂಬುದಕ್ಕೆ ಪಂಜೆ ಮಂಗೇಶರಾಯರ 'ಕೋಟಿ-ಚೆನ್ನಯ' (1925) ಕನ್ನಡ ಕಾದಂಬರಿ ಮಾದರಿಯಾಗಿದೆ. ಭತ್ತದ ನಾಟಿ ಮಾಡುವ ಸಂದರ್ಭದಲ್ಲಿ ಹೆಂಗಸರು ಹಾಡುವ ಹಾಡುಗಳು ತುಳುವಿನ 'ಕಬಿತ'ಗಳು - 'ತುಳು ಕಬಿತಗಳು' (1996 - ಬಿ. ಎ. ವಿವೇಕ ರೈ, ರಾಜಶ್ರೀ) ಸಂಕಲನದಲ್ಲಿ ವೈವಿಧ್ಯಪೂರ್ಣ ವಸ್ತುಗಳುಳ್ಳ 'ಕಬಿತ'ಗಳಿವೆ.
ಬಾಸೆಲ್ ಮಿಶನ್ ಪ್ರಕಟಿಸಿದ ತುಳು ಪುಸ್ತಕಗಳು, ಎಸ್. ಯು. ಪಣಿಯಾಡಿಯವರು 1928ರಲ್ಲಿ ಉಡುಪಿಯಲ್ಲಿ ಆರಂಭಿಸಿದ ತುಳುವ ಮಹಾಸಭೆ, ಮಂಗಳೂರು ಆಕಾಶವಾಣಿಯಲ್ಲಿ ತುಳು ಕಾರ್ಯಕ್ರಮಗಳ ಪ್ರಸಾರದ ಆರಂಭ (1976), ಪ್ರೊ. ಕು. ಶಿ. ಹರಿದಾಸ ಭಟ್ಟರು ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಆರಂಭಿಸಿದ ತುಳು ನಿಘಂಟು ಯೋಜನೆ (1979), ಶ್ರೀ ವೀರಪ್ಪ ಮೊಯಿಲಿಯವರು ಮುಖ್ಯಮಂತ್ರಿಯಾಗಿದ್ದಾಗ ಸ್ಥಾಪನೆಗೊಂಡ 'ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ' (1994 - ಪ್ರಥಮ ಅಧ್ಯಕ್ಷರು - ಡಾ| ಬಿ. ಎ. ವಿವೇಕ ರೈ) - ಇವು ತುಳು ಸಾಹಿತ್ಯ ಚಳುವಳಿಗೆ ವಿವಿಧ ರೀತಿಯಲ್ಲಿ ಪ್ರೇರಣೆ ನೀಡಿವೆ.
ಸ್ವಿಝಲೆರ್ಂಡಿನ ದಕ್ಷಿಣ ಕನ್ನಡ ಜಿಲ್ಲೆಗೆ ಬಂದ ಬಾಸೆಲ್ ಮಿಷನ್ 1841ರಲ್ಲಿ ಮಂಗಳೂರಿನ ಬಲ್ಮಠದಲ್ಲಿ ಬಾಸೆಲ್ ಮಿಷನ್ ಪ್ರಸ್ಸನ್ನು ಆರಂಭಿಸಿತು. ಜಮನರ್ಿಯ  ರೆ| ವಿ. ಮೇನರ್ ಅವರ 'ತುಳು-ಇಂಗ್ಲಿಷ್ ನಿಘಂಟು' (1886), 'ಇಂಗ್ಲಿಷ್ ತುಳು ನಿಘಂಟು' (1888), 'ಪಾಡ್ದನೊಳು' (1886), 'ಸಹಸ್ರಾರ್ಥ ಗಾದೆಲು' (1874), ತುಳು ಗೀತೊಳೆ ಪುಸ್ತಕ' (ವಿಸ್ತೃತ ಆವೃತ್ತಿ - 1878), ಜಮನರ್ಿಯ ರೆ| ಜೆ. ಬ್ರಿಗೆಲ್ ಅವರು ಇಂಗ್ಲಿಷಿನಲ್ಲಿ ಬರೆದ ತುಳು ವ್ಯಾಕರಣ' (1872), ಎ. ಸಿ. ಬವರ್ೆಲ್ ಅವರ 'ದಿ ಡೆವಿಲ್ ವರ್ಶಿಪ್ ಆಫ್ ದಿ ತುಲುವಾಸ್' (1894-97) - ಇಂಥ ಹಲವು ಕೃತಿಗಳನ್ನು ಬಾಸೆಲ್ ಮಿಷನ್ ಪ್ರಕಟಿಸಿತು. ಕ್ರೈಸ್ತ ಧರ್ಮ ಪ್ರಚಾರದ ಉದ್ದೇಶದಿಂದ ಬಾಸೆಲ್ ಮಿಷನ್ನ ಧರ್ಮಗುರುಗಳು ಬೈಬಲನ್ನು ತುಳುವಿಗೆ ಭಾಷಾಂತರಿಸಿದರು (1859); ತುಳುವಿನಲ್ಲಿ ನೂರಾರು ಸ್ತೋತ್ರಗೀತಗಳನ್ನು ರಚಿಸಿದರು.
ತನ್ನ ತಾಯ್ನುಡಿ ಗುಜರಾತಿನಲ್ಲಿ ಬರೆಯುತ್ತಿದ್ದ ಮಹಾತ್ಮಾ ಗಾಂಧೀಜಿಯವರ ಭಾಷಾಧೋರಣೆಯಿಂದ 'ತುಳು ಜನಗಳ ಆತ್ಮೋದ್ಧಾರದ 'ತುಳು ಚಳುವಳಿಗೆ ಪ್ರೇರಣೆ ಸಿಕ್ಕಿತು. ಗುಜರಾತಿನ ಬರೋಡಾದಲ್ಲಿ ಗ್ರಂಥಪಾಲಕರಾಗಿದ್ದ ಎಸ್. ಯು. ಪಣಿಯಾಡಿಯವರು ಉಡುಪಿಗೆ ಬಂದು, 1928ರಲ್ಲಿ 'ತುಳುವ ಮಹಾಸಭೆ' ಆರಂಭಿಸಿದರು. ದೇಶದಿಂದ 'ಬಿಳಿ ಮುಖದ' ಫಿರಂಗಿಯರನ್ನು ಓಡಿಸಬೇಕೆಂದು ನಡೆಯುತ್ತಿದ್ದ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ತುಳುನಾಡಿನ ಮೂರು ಯುವಕರು 1930ನೇ ಇಸವಿಯಲ್ಲಿ ವೆಲ್ಲೂರಿನ ಸೆಂಟ್ರಲ್ ಜೈಲಿನಲ್ಲಿದ್ದರು. ಅವರು ಈ ಜೈಲಿನಲ್ಲಿ ತುಳುಕತೆ, ಕವನ ಬರೆಯುತ್ತಿದ್ದರು. ಆ ಮೂವರು - ಎಸ್. ಯು. ಪಣಿಯಾಡಿ, ಪೊಳಲಿ ಶೀನಪ್ಪ ಹೆಗ್ಡೆ ಹಾಗೂ ಕೆ. ಬಿ. ನಾರಾಯಣ ಶೆಟ್ಟಿ, ಕಿಲ್ಲೆ.
 

Monday, October 18, 2010

Tulu books published by S U Paniyadi

Tulu-05-2010

ತುಳುವ ಸಾಹಿತ್ಯಮಾಲೆ

ಪಣಿಯಾಡಿಯವರು ತುಳು ಚಳವಳದ ಒಂದು ಐತಿಹಾಸಿಕ ಮಹತ್ತ್ವದ ಕೆಲಸ 'ತುಳುವ ಸಾಹಿತ್ಯಮಾಲೆ'. 'ತುಳುವ ಸಾಹಿತ್ಯಮಾಲೆ'ಯಲ್ಲಿ ಪಣಿಯಾಡಿಯವರು ಪ್ರಕಟಿಸಿದ ಪುಸ್ತಕಗಳಿವು -
1. ಬಡಕಬೈಲ್ ಪರಮೇಶ್ವರಯ್ಯ (ಜನನ 1881) ಅವರ 'ತುಳು ಕಿಟ್ನರಾಜಿ ಪರ್ಸಂಗೊ' (ಯಕ್ಷಗಾನ ಪ್ರಸಂಗ - 1929)
2. ಪೊಳಲಿ ಶೀನಪ್ಪ ಹೆಗ್ಡೆ (1889-1966) ಅವರ 'ತುಳುವಾಲ ಬಲಿಯೇಂದ್ರ' (ಖಂಡ ಕಾವ್ಯ - 1929)
3. ಸತ್ಯಮಿತ್ರ ಬಂಗೇರರ 'ಅಳಿಯ ಸಂತಾನ ಕಟ್ಟ್‌ದ ಗುಟ್ಟು' (ಸಂಶೋಧನೆ - 1929)
4. ಕೆ.ಬಿ. ನಾರಾಯಣ ಶೆಟ್ಟಿ ಕಿಲ್ಲೆ (1901-1953) ಅವರ 'ಕಾನಿಗೆ' (ಕವನ ಸಂಕಲನ - 1932)
5. ಎಸ್. ಯು. ಪಣಿಯಾಡಿಯವರ - 'ತುಳು ವ್ಯಾಕರಣ' (1932)
6. ಮಾಧವ ತಿಂಗಳಾಯರ (1913-1934) 'ಜನಮರ್ಲ್' (ನಾಟಕ - 1933)
7. ಎಂ. ವಿಠಲ ಹೆಗ್ಡೆ ಅವರ 'ಮದ್ಮಳತ್ತ್ ಮದ್ಮಯೆ' (ನೀಳ್ಗತೆ - 1933)
8. ಪೊಳಲಿ ಶೀನಪ್ಪ ಹೆಗ್ಡೆ ಅವರ 'ಬಂಗಾರ್‌ದಂಗಿದ ಕತೆ' (ನೀಳ್ಗತೆ - 1933)
9. ತುಳು ಪದ್ಯಮಾಲಿಕೆ
10. ಪೊಳಲಿ ಶೀನಪ್ಪ ಹೆಗ್ಡೆ ಅವರ - 'ಮಿತ್ಯ ನಾರಾಯಣ ಕತೆ' (ಕಾದಂಬರಿ 1935)
11. ಎಸ್. ಯು. ಪಣಿಯಾಡಿಯವರ - 'ಸತೀ ಕಮಲೆ' (ಕಾದಂಬರಿ - 1936)

ತುಳುವ ಸಾಹಿತ್ಯಮಾಲೆಯ ಪ್ರಕಟಣೆಗಳನ್ನು ನೋಡುವಾಗ ಅವುಗಳಲ್ಲಿ ಎರಡು ಕಾದಂಬರಿಗಳು, ಎರಡು ಕವನ ಸಂಕಲನಗಳು, ಎರಡು ನೀಳ್ಗತೆಗಳು, ಒಂದು ವ್ಯಾಕರಣ ಕೃತಿ, ಒಂದು ಸಂಶೋಧನ ಗ್ರಂಥ, ಒಂದು ನಾಟಕ, ಒಂದು ಖಂಡ ಕಾವ್ಯ ಹಾಗೂ ಒಂದು ಯಕ್ಷಗಾನ ಪ್ರಸಂಗ ಇವೆ.

ಬಾಸೆಲ್ ಮಿಶನ್‍ನವರ ಮುದ್ರಣಾಲಯ 1841ರಲ್ಲಿ ಮಂಗಳೂರಿನಲ್ಲಿ ಆರಂಭಗೊಂಡಿತು. ತುಳು 'ಮತ್ತಾಯನ 'ಸುವಾರ್ತೆಯನ್ನು ಬಾಸೆಲ್ ಮಿಶನ್ 1842ರಲ್ಲಿ ಪ್ರಕಟಿಸಿತು. ರೆ.ಜೆ.ಜೆ. ಅಮ್ಮನ್ನರ 'ಸತ್ಯವೇದ' ತುಳು ಭಾಷಾಂತರ, ರೆ. ಕ್ಯಾಮರೆರ್‌ರ 'ತುಳು ಕೀರ್ತನೆಗಳು', ರೆ. ಆಗಸ್ಟ್‌ಮ್ಯಾನರ್‌ರ 'ತುಳು-ಇಂಗ್ಲಿಷ್ ನಿಘಂಟು (1886), 'ಇಂಗ್ಲಿಷ್-ತುಳು ನಿಘಂಟು' (1888), ಜೋನ್ ಜೇಮ್ಸ್ ಬ್ರಿಗೆಲ್‍ರ 'ತುಳು ವ್ಯಾಕರಣ', ಗಾಬ್ರಿಯಲ್ ಬಂಗೇರರ 'ಒಂದು ಸಾವಿರ ತುಳು ಗಾದೆಗಳು' (1896) - ಈ ಪುಸ್ತಕಗಳು ಬಾಸೆಲ್ ಮಿಶನ್‍ನಲ್ಲಿಪ್ರಕಟವಾದುವು. ತುಳು ಗಾದೆಗಳ ಸಂಗ್ರಹ, ಕ್ರೈಸ್ತ ಸಾಹಿತ್ಯದ ತುಳು ಭಾಷಾಂತರದ ಕೆಲಸಗಳನ್ನು ಬಾಸೆಲ್ ಮಿಶನ್ ಆರಂಭಿಸಿತು. ಬಾಸೆಲ್ ಮಿಶನ್‍ನವರು ತುಳು ಚಳವಳಕ್ಕೆ ಪ್ರೇರಣೆ ನೀಡಿದರು. ತನ್ನ 'ತುಳುವ ಸಾಹಿತ್ಯಮಾಲೆ'ಯಲ್ಲಿ ಕತೆ, ಕವನ, ಕಾದಂಬರಿ, ನಾಟಕ, ಸಂಶೋಧನೆ, ವ್ಯಾಕರಣ - ಇಂಥ ಪುಸ್ತಕಗಳನ್ನು ಪ್ರಕಟಿಸಿ ಪಣಿಯಾಡಿಯವರು ತುಳುವಿನ ನವೋದಯಕ್ಕೆ ನಾಂದಿ ಹಾಡಿದರು, ಪಂಚಾಂಗ ಕಟ್ಟಿದರು.
ತುಳು ಚಳವಳದ ಒಂದು ಕಾರ್ಯಕ್ರಮವಾಗಿ ಪಣಿಯಾಡಿಯವರು ತುಳುನಾಡಿನ ಕನ್ನಡ ಪತ್ರಿಕೆಗಳಲ್ಲಿ ತುಳು ಪುರವಣಿ ಪ್ರಕಟಿಸುವ ಯೋಜನೆ ಮಾಡಿದರು. ಉಡುಪಿಯ, ಕೆ. ಹೊನ್ನಯ್ಯ ಶೆಟ್ಟರ ಸಂಪಾದಕತ್ವದ 'ನವಯುಗ' ವಾರಪತ್ರಿಕೆ 1936-39ರಲ್ಲಿ ತುಳು ಪುರವಣಿಯನ್ನು ಪ್ರಕಟಿಸುತ್ತಿತ್ತು. 'ನವಯುಗ' ಪತ್ರಿಕೆ 1940ರ ವರೆಗೆ ಪಣಿಯಾಡಿಯವರ ತುಳುನಾಡು ಪ್ರೆಸ್‍ನಲ್ಲಿ ಮುದ್ರಣಗೊಳ್ಳುತ್ತಿತ್ತು. ಕೊರಡ್ಕಲ್ ಶ್ರೀನಿವಾಸ ರಾವ್ ಮತ್ತು ಇತರ ಸಾಹಿತಿಗಳ ಕನ್ನಡ ಕೃತಿಗಳನ್ನು ಪಣಿಯಾಡಿಯವರು ತನ್ನ ಸಪ್ಪ್ಲೈ ಏಜೆನ್ಸಿ ಸಂಸ್ಥೆಯಿಂದ ಪ್ರಕಟಿಸಿದರು. ಶಿವಮೊಗ್ಗದ ಕೂಡಲಿ ಚಿದಂಬರಂ ಅವರ 'ವಿಚಾರವಾಹಿನಿ' ಮಾಸಪತ್ರಿಕೆ ಪಣಿಯಾಡಿಯವರ ಪ್ರೆಸ್‍ನಲ್ಲಿ ಅಚ್ಚಾಗುತ್ತಿತ್ತು.

- ಮುರಳೀಧರ ಉಪಾಧ್ಯ

mupadhyatulu.blogspot.com.

Tulu Movement - S U Paniyadi (ತುಳು ಚಳವಳ)

Tulu-3-2010

ತುಳು ಚಳವಳ

ಬಾಸೆಲ್ ಮಿಶನ್‍ನವರ ತುಳು ಪ್ರಕಟಣೆಗಳು ಪಣಿಯಾಡಿಯವರಿಗೆ ಪ್ರೇರಣೆ ನೀಡಿದುವು; ಅವರು ತನ್ನ ತಾಯ್ನುಡಿಯ ಭವಿಷ್ಯವನ್ನು ಕುರಿತು ಗಂಭೀರವಾಗಿ ಯೋಚಿಸುವಂತೆ ಮಾಡಿದುವು. ತನ್ನ 'ತುಳು ವ್ಯಾಕರಣ' (1937) ಪುಸ್ತಕದ ಮುನ್ನುಡಿಯಲ್ಲಿ ಪಣಿಯಾಡಿಯವರು ಹೀಗೆ ಬರೆದಿದ್ದಾರೆ -

ಸಣ್ಣದಿಂದಲೂ ನನಗೆ ತುಳುವರ ಮೇಲೂ ತುಳುನಾಡಿನ ಮೇಲೂ, ತುಳು ಬಾಷೆಯ ಮೇಲೂ ಪ್ರೇಮವು ವಿಶೇಷವಾಗಿತ್ತು. ಯಾರಾದರೂ ತುಳುವರನ್ನಾಗಲಿ, ತುಳು ಭಾಷೆಯನ್ನಾಗಲಿ ಹೀಯಾಳಿಸಿದರೆ ನನ್ನ ಮನಸ್ಸಿಗೆ ತುಂಬಾ ಬೇಸರವಾಗುತ್ತಿತ್ತು. ಚಿಕ್ಕ ಪ್ರಾಯದಲ್ಲೇ ನನ್ನ ಜನ್ಮಸ್ಥಾನವನ್ನು ಬಿಟ್ಟು ವಿದ್ಯಾಭ್ಯಾಸಕ್ಕೆ ಮೈಸೂರು ದೇಶಕ್ಕೆ ಹೋದುದರಿಂದ ಅಲ್ಲಿಯ ಕೆಲಜನರಿಗೆ ತುಳು ಭಾಷೆಯ ಮೇಲೆ ಇರುವ ಬುದ್ಧಿಯನ್ನು ನೋಡಿ ಖೇದವಾಗುತ್ತಿತ್ತು. ಆದರೆ ಅವರಿಗೆ ಉತ್ತರ ಕೊಡುವಷ್ಟು ತಿಳುವಳಿಕೆಯ ನನ್ನಲ್ಲಿಲ್ಲವಾಗಿದ್ದರೂ ತುಳು ಭಾಷೆಯ ಪ್ರೇಮವು ಮಾತ್ರ ಹೆಚ್ಚಾಗುತ್ತಿತ್ತು. ಸುಮಾರು 1916ನೇ ಇಸವಿಯಲ್ಲಿ 'ತುಳು ಬಾಷೆಯಲ್ಲಿ ಕೆಲವು ಪುಸ್ತಕಗಳನ್ನು ಬರೆದು ಪ್ರಕಟಿಸಬೇಕು' ಎಂಬ ಸಂಕಲ್ಪವು ಮಾತ್ರ ತಲೆದೋರಿತು. ಈ ಉದ್ದೇಶವನ್ನು ನೆರವೇರಿಸುವುದು ಹೇಗೆಂಬುದು ನನಗೆ ಗೊತ್ತಿರಲಿಲ್ಲ. ಮದ್ರಾಸಿನಲ್ಲಿ ನಾನು ಕಲಿಯುತ್ತಿದ್ದಾಗ ಆಗಾಗ್ಯೆ 'ಕೊನೆಮಾರಾ' ಲೈಬ್ರೇರಿಗೆ ಹೋಗಿ ಅನೇಕ ಪುಸ್ತಕಗಳನ್ನು ನೋಡಿ ತುಳುವರು, ತುಳುನಾಡು ಮತ್ತು ತುಳು ಭಾಷೆ ವಿಷಯವಾಗಿ ಕೆಲವು ಮಾಹಿತಿಗಳನ್ನು ಸಂಗ್ರಹಿಸಲಿಕ್ಕೆ ಹತ್ತಿದೆನು. ಸುಮಾರು 1918ನೇ ಇಸವಿಯಲ್ಲಿ ಡಾಕ್ಟರ್ ಕಾಲ್ಡ್‌ವೆಲ್‍ರವರು ಬರೆದ ದ್ರಾವಿಡ ಭಾಷೆಗಳ ತುಲನಾತ್ಮಕ ವ್ಯಾಕರಣವನ್ನು ಓದಲಿಕ್ಕೆ ಹತ್ತಿದೆನು. (Dr. Cadwell's 'Comparative Grammar of the Dravidian Languages). ಅದನ್ನು ಓದುವಾಗ "Next in the list of cultivated Dravidian Languages stands Tulu or Tuluva. The claim of this peculiar and very interesting language to be ranked amongst the cultivated members of the family may perhaps be regarded as open to question, seeing that it is destitute of a literature in the proper sense of the term and never had a character of its own." "Not withstanding its want of literature, Tulu is one of the most highly developed languages of the Dravidian family."(ವ್ಯವಸಾಯ ಮಾಡಲ್ಪಟ್ಟ ದ್ರಾವಿಡ ಭಾಷೆಗಳಲ್ಲಿ ತುಳುವೂ ಒಂದಾಗಿದೆ. ಒಂದು ರೀತಿಯಲ್ಲಿರುವ ಮತ್ತು ವಿಶೇಷವಾದ ಅಭಿರುಚಿಯನ್ನು ಹುಟ್ಟಿಸುವ ಈ ಭಾಷೆಯನ್ನು ವ್ಯವಸಾಯ ಹೊಂದಿದ ಭಾಷೆಗಳ ಸಾಲಿನಲ್ಲಿ ಹಾಕುವುದಕ್ಕೆ ಆಕ್ಷೇಪ ಬರಬಹುದು. ಏತಕ್ಕೆಂದರೆ ಸಾಹಿತ್ಯವೆಂಬ ಶಬ್ದದ ಅರ್ಥಕ್ಕೆ ಒಳಪಡುವ ಗ್ರಂಥಗಳು ಈ ಭಾಷೆಯಲ್ಲಿ ಸಿಕ್ಕುವುದಿಲ್ಲ ಮತ್ತು ಲಿಪಿಯೂ ಇಲ್ಲ ಸಾಹಿತ್ಯದ ಬೇಡಿಕೆಯ ಅಗತ್ಯವಿದ್ದರೂ ತುಳು ಭಾಷೆಯು ಹೆಚ್ಚು ಸಂಸ್ಕಾರ ಹೊಂದಿ ಅಭಿವೃದ್ಧಿಗೆ ಬಂದ ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ.)
- ಎಂಬ ಈ ಅಭಿಪ್ರಾಯವನ್ನು ಓದಿದೊಡನೆ ನನಗೆ ತುಂಬಾ ಹುರುಪು ಉಂಟಾಯಿತು. ಆದರೆ ಈ ತರದ ಅಭಿಪ್ರಾಯವನ್ನು ಕೊಡಲು ಮೂಲ ಕಾರಣವೇನೆಂಬುದು ನನಗೆ ತಿಳಿಯದೆ ಹೋಯಿತು. ಆದರೂ ಮಾತೃಭಾಷೆಯ ಸೇವೆಯನ್ನು ಮಾಡಬೇಕೆಂದು ಸಂಕಲ್ಪಿಸಿದ ನನಗೆ ಆಶೆಯು ಹೆಚ್ಚಿತು. ಕೆಲವು ವಿದ್ವಾಂಸರ ಕೈಯಲ್ಲಿ ಚರ್ಚಿಸಿದರೂ ಸಮರ್ಪಕವಾದ ಉತ್ತರವು ದೊರೆಯದೆ ಹೋಯಿತು. ಪರೀಕ್ಷೆಗಳ ಗಲಾಟೆಯಿಂದಲೂ, ಇನ್ನಿತರ ತೊಂದರೆಗಳಿಂದಲೂ ನನ್ನ ಕೆಲಸವನ್ನು ಹೆಚ್ಚು ಮುಂದುವರಿಸಲು ಅವಕಾಶವಿಲ್ಲದೆ ಹೋಯಿತು. ಆದರೆ ಸಂದರ್ಭವೊದಗಿದ ಹಾಗೆಲ್ಲ ಅನೇಕರ ಕೂಡೆ ಚರ್ಚಿಸುತ್ತಿದ್ದೆನು. ಕೆಲವರು ನನ್ನನ್ನು ಹುಚ್ಚನೆಂದೂ, ಕೆಲವರು ಅನಾವಶ್ಯಕ ಕೆಲಸವಿದು ಎಂದೂ ಮತ್ತೆ ಕೆಲವರು ಸಾಯುತ್ತಿರುವ ಭಾಷೆಯನ್ನು ಬದುಕಿಸಬಾರದೆಂದೂ ಹೇಳುತ್ತಿದ್ದರಷ್ಟೆ ವಿನಹ ಯಾರೂ ಸಹಾನುಭೂತಿಯನ್ನು ತೋರಿಸಲಿಲ್ಲ. ಒಬ್ಬರಿಬ್ಬರು ಮಾತ್ರ ಮೂರು ನಾಲ್ಕು ಕವಿತೆಗಳನ್ನು ನನಗಾಗಿ ಮಾಡಿಕೊಟ್ಟರು.

1920ರಲ್ಲಿ ನಾನು ಬರೋಡಾ ಲೈಬ್ರರಿಯಲ್ಲಿ ನೌಕರಿಗೆ ಸೇರಿದ ಮೇಲೆ ಅವಕಾಶವು ಸಿಕ್ಕಿತು. ಪುಸ್ತಕಗಳ ಸಹಾಯವೂ ತುಂಬಾ ಇತ್ತು. ರೆವರೆಂಡ್ ಜೆ. ಬ್ರಿಗೆಲ್‍ರವರು ಬರೆದು 1872ರಲ್ಲಿ ಪ್ರಕಟಿಸಿದ ತುಳು ವ್ಯಾಕರಣವನ್ನು, ಸುಮಾರು 1856ರಲ್ಲಿ ರೆವರೆಂಡ್ ಕ್ಯಾಮರೆರ್‌ರವರು ಸುರುಮಾಡಿ ರೆವರೆಂಡ್ ಎ. ಮೇನ್ನರವರು ಮುಗಿಸಿ 1888ರಲ್ಲಿ ಅವರೇ ಪ್ರಕಟಿಸಿದ ಇಂಗ್ಲಿಷ್-ತುಳು ಶಬ್ದಕೋಶವನ್ನೂ ತರಿಸಿ ತುಳು ಭಾಷೆಯನ್ನು ಸರಿಯಾಗಿ ಕಲಿಯಲಾರಂಭಿಸಿದೆನು. ರೆವರೆಂಡ್ ಬ್ರಿಗೆಲ್‍ರವವರ ವ್ಯಾಕರಣದಲ್ಲಿಯೂ, ಶಬ್ದಕೋಶಗಳಲ್ಲಿಯೂ ಸಂಪೂರ್ಣ ತೃಪ್ತಿಯು ಬಾರದೆ ಹೋಯಿತು. ಮಿಶನರಿಗಳು ಬರೆದು ಪ್ರಕಟಿಸಿದ ಕೆಲ ಪುಸ್ತಕಗಳನ್ನೂ ಓದಿದೆನು. ಅವರು ವಿದೇಶೀಯರಾಗಿದ್ದು ಈ ಬಡಭಾಷೆಯ ಮೇಲೆ ಮಾಡಿದ ಕೆಲಸವನ್ನು ನೋಡಿ ಅತ್ಯಾನಂದವಾಯಿತು. ಮತ್ತು ನನ್ನ ಈ ಕೃತಿಗೆ ಮೂಲಗುರುಗಳು ಅವರೇ ಎಂದು ಹೇಳಿದರೂ ತಪ್ಪಾಗಲಿಕ್ಕಿಲ್ಲ. ಆಗಲೇ ಸರಿಯಾದ ತುಳು ವ್ಯಾಕರಣವನ್ನೊಂದು ಬರೆಯಬೇಕೆಂದು ಸಂಕಲ್ಪಿಸಿದೆನು. ಕೂಡಲೇ ಸಾಧ್ಯವಿಲ್ಲದುದರಿಂದ ಅದಕ್ಕೆ ಬೇಕಾದ ಸಂಗ್ರಹಗಳನನ್ನು ಮಾಡುತ್ತಿದ್ದೆನು. 1921ರಲ್ಲಿ ಮಾದರಿಗಾಗಿ 'ಸತೀ ಕಮಲೆ' ಎಂಬ ನಾವೆಲನ್ನು ತುಳು ಭಾಷೆಯಲ್ಲಿ ಬರೆದೆನು. (ಹಣದ ಅಡಚಣೆಯಿಂದ ಇನ್ನೂ ಪ್ರಕಟಿಸಲಿಕ್ಕಾಗಲಿಲ್ಲ) ಅದೇ ಸಮಯದಲ್ಲಿ ಕೆಲವು ಸ್ನೇಹಿತರ ಮತ್ತು ಕೆಲವು ಬಂಧುಗಳ ಕೂಡ ತುಳು ಭಾಷೆಯಲ್ಲಿಯೇ ಪತ್ರವ್ಯವಹಾರವನ್ನು ನಡೆಸುತ್ತಿದ್ದೆನು. ನನ್ನ ಮಾತೃಭಾಷೆಯ ಸೇವೆಯ ಕೆಲಸದಲ್ಲಿ ತನ್ನ ಶಕ್ತಿಮೀರಿ ಕೆಲಸವನ್ನು ಮಾಡುವದಾಗಿ ನನ್ನನ್ನು ಪ್ರೋತ್ಸಾಹಿಸಿದವರ ಪೈಕಿ ಮೊದಲನೆಯವರು ಶ್ರೀಯುತ ಎನ್. ಎ. ಶೀನಪ್ಪ ಹೆಗ್ಗಡೆಯವರು. ಅಂದಿನಿಂದ - 1921ರಿಂದ ತನ್ನಿಂದ ಆದಷ್ಟು ಕೆಲಸವನ್ನು ಅವರು ಮಾಡುತ್ತಲೇ ಇದ್ದಾರೆ.
ಮಾತೃಭಾಷೆಯ ಪ್ರೇಮದಿಂದಲೂ, ರಾಜಕೀಯ ಪರಿಸ್ಥಿತಿಯಿಂದಲೂ ಎಷ್ಟೇ ಆರ್ಥಿಕ ಅಡಚಣೆ ಇದ್ದರೂ ನನ್ನ ಕೆಲಸಕ್ಕೆ ತಿಲಾಂಜಲಿಯನ್ನು ಕೊಟ್ಟು 1923 ಫೆಬ್ರವರಿಯಿಂದ ವ್ಯಾಪಾರ ವೃತ್ತಿಯನ್ನು ಅವಲಂಬಿಸಿ ಉಡುಪಿಯಲ್ಲೆ ಇರತೊಡಗಿದೆನು. ಈ ವಿಚಾರವೂ, ರಾಜಕೀಯ ವಿಷಯವೂ ಒಟ್ಟೊಟ್ಟಿಗೆ ಬೆರಕುತ್ತಿದ್ದುದರಿಂದಲೂ, ಜನಸಹಾಯವೂ, ಧನಸಹಾಯವೂ ಕಮ್ಮಿಯಾದುದರಿಂದಲೂ ಹೆಚ್ಚಿನ ಕೆಲಸವನ್ನು ಮಾಡಿ ನನ್ನ ಧ್ಯೇಯವನ್ನು ಮುಂದವರಿಸಲು ಆಗದಿದ್ದರೂ, ನನ್ನ ಹುಚ್ಚನ್ನು ಅನೇಕರಿಗೆ ಹಚ್ಚಿಸಿ ನನ್ನ ಅಭಿಪ್ರಾಯಕ್ಕೆ ಅನುಕೂಲವಿರುವ ಸಂಖ್ಯೆಯು ಹೆಚ್ಚಾಗುವಂತೆ ಪ್ರಯತ್ನಪಡುತ್ತಿದ್ದೆನು. ಶ್ರೀ ಶ್ರೀ ಪೇಜಾವರ ಸ್ವಾಮಿಯವರ ಉದಾರ ಸಹಾಯದಿಂದ ಮೂರು ಪುಸ್ತಕಗಳನ್ನು 'ತುಳುವ ಸಾಹಿತ್ಯಮಾಲೆ'ಯಲ್ಲಿ ಪ್ರಕಟಿಸಿದೆನು (ಎಸ್. ಯು. ಪಣಿಯಾಡಿ, 'ತುಳು ವ್ಯಾಕರಣ', 1932).

ಪಣಿಯಾಡಿಯವರು ಉಲ್ಲೇಖಿಸಿರವ ಸ್ವಾಮಿಗಳು - ಪೇಜಾವರ ಮಠದ ಮೂವತ್ತೆರಡನೆಯ ಪೀಠಾಧಿಪತಿಗಳಾಗಿದ್ದ ಶ್ರೀ ವಿಶ್ವಮಾನ್ಯ ತೀರ್ಥರು. ಈ ಸ್ವಾಮಿಗಳು ತುಳುವ ಸಾಹಿತ್ಯಮಾಲೆಯ ಆಶ್ರಯದಾತರಾಗಿದ್ದರು.
ಪೊಳಲಿ ಶೀನಪ್ಪ ಹೆಗಡೆಯವರು ತನ್ನ ತುಳು ಕಾದಂಬರಿ 'ಮಿತ್ಯ ನಾರಾಯಣ ಕತೆ'ಯ ಮುನ್ನುಡಿಯಲ್ಲಿ ಪಣಿಯಾಡಿಯವರ ಕುರಿತು, ನಾನು ವೆಲ್ಲೂರು ಜೈಲಿನಲ್ಲಿದ್ದಾಗ ಅದೇ ಜೈಲಿಗೆ ನಮ್ಮ ಜಿಲ್ಲೆಯ ಸುಮಾರು ಇಪ್ಪತ್ತು ಮಂದಿಯನ್ನು ಕಳುಹಿಸಿದರು. ಅವರಲ್ಲಿ ಪಣಿಯಾಡಿ ಶ್ರೀನಿವಾಸ ಉಪಾಧ್ಯಾಯರೂ, ಕೂಳೂರಿನ ಕಿಲ್ಲೆ ನಾರಾಯಣ ಶೆಟ್ಟರೂ ಇದ್ದರು. ನಿದ್ದೆ ಬಾರದ ಒಂದು ರಾತ್ರಿ ಕಿಲ್ಲೆ ನಾರಾಯಣ ಶೆಟ್ಟರು ಒಂದು ಕತೆ ಹೇಳಿದರು. ಮರುದಿನ, ಬೇರೆ ಕೆಲಸವೇನೂ ಇಲ್ಲದ್ದರಿಂದ ನಾನು ಕತೆಯನ್ನು ಬರೆಯತೊಡಗಿದೆ. ಆಮೇಲೆ, ನಾನು ಹೇಳಿದ ತುಳುನಾಡಿನ 'ಎರಿಬೆರ್ಮೆರ್' ದೈವಕತೆಯನ್ನು ಕೇಳಿ ತುಳು ಭಾಷೆಯ ಅಂದ-ಚಂದವನ್ನು ನೆನೆದು, ಕಿಲ್ಲೆಯವರು ತುಳುವಿನಲ್ಲಿ ಚಂದ-ಚಂದದ ನಲುವತ್ತೆಂಟು ಹಾಡುಗಳನ್ನು - 'ಕಾನಿಗೆ' ಸಂಕಲನವನ್ನು ಬರೆದರು. ಇದನ್ನು ನೋಡಿ ಪಣಿಯಾಡಿಯವರು ನಮ್ಮನ್ನು ಇನ್ನಷ್ಟು ಪ್ರೋತ್ಸಾಹಿಸಿದರು (ಪೊಳಲಿ ಶೀನಪ್ಪ ಹೆಗಡೆ - 'ಮಿತ್ಯ ನಾರಾಯಣ ಕತೆ' - 1935) ಎಂದಿದ್ದಾರೆ.

- ಮುರಳೀಧರ ಉಪಾಧ್ಯ
mupadhyatulu.blogspot.com

1. ಎಸ್.ಯು. ಪಣಿಯಾಡಿ (ಕನ್ನಡ - 1997)
- ಮುರಳೀಧರ ಉಪಾಧ್ಯ ಹಿರಿಯಡಕ
ಪ್ರಸರಾಂಗ, ಮಂಗಳೂರು ವಿಶ್ವವಿದ್ಯಾನಿಲಯ

2. ಎಸ್.ಯು. ಪಣಿಯಾಡಿ (ತುಳು - 1996)
- ಮುರಳೀಧರ ಉಪಾಧ್ಯ ಹಿರಿಯಡಕ
ಪ್ರ. - ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು

Sunday, October 17, 2010

Tuluva Mahasabhe - S U Paniyadi

Tulu-04-2010

ತುಳುವ ಮಹಾಸಭೆ

ಪಣಿಯಾಡಿಯವರ ಉತ್ಸಾಹ ಕನಸುಗಳೊಂದಿಗೆ 1928ರ ಸೆಪ್ಟೆಂಬರ್ 23ನೆ ತಾರೀಕಿನಂದು ಉಡುಪಿಯಲ್ಲಿ ತುಳುವ ಮಹಾಸಭೆ ಸ್ಥಾಪನೆಗೊಂಡಿತು. ತುಳುವ ಮಹಾಸಭೆಯ ಪ್ರಥಮ ವರ್ಷದ ಕಾರ್ಯಕಾರಿ ಸಮಿತಿ ಹೀಗಿತ್ತು - ಅಂಜಾರು ರಾಮಣ್ಣ ಹೆಗ್ಗಡೆ (ಅಧ್ಯಕ್ಷ), ಎಸ್. ಯು. ಪಣಿಯಾಡಿ (ಕಾರ್ಯದರ್ಶಿ), ಸದಸ್ಯರು - ಡಾ. ಯು. ರಾಮಚಂದ್ರ ರಾವ್, ಹಿರಿಯಡ್ಕ ನಾರಾಯಣ ರಾವ್, ಯು. ವೆಂಕಪ್ಪಯ್ಯ. 30-9-1928ರಂದು ಮುದ್ರಣಗೊಂಡಿರುವ ತುಳುವ ಮಹಾಸಭೆಯ ವಿಜ್ಞಾಪನೆಯ ಆರಂಭದ ಪುಟದಲ್ಲಿ ನೆಹರೂ ಕಮಿಟಿ ವರದಿಯ ಸಾಲುಗಳಿವೆ - "The mere fact that the people living in a particular area feel that they are a unit and desire to develop their culture is an important consideration even though there may be no sufficient historical or cultural justification for their demand."
'ತುಳುವ ಮಹಾಸಭೆ'ಯ ವಿಜ್ಞಾಪನೆಯಲ್ಲಿ ಪಣಿಯಾಡಿಯವರು ಬರೆದಿರುವ ಒಂದು ಲೇಖನ ಇದೆ. ತುಳು ಭಾಷೆ, ತುಳು ಚಳವಳ, ತುಳುನಾಡನ್ನು ಕುರಿತ ಪಣಿಯಾಡಿಯವರ ಚಿಂತನೆಗಳು ಈ ಲೇಖನದಲ್ಲಿ ಸ್ಪಷ್ಟವಾಗಿದೆ. ಪಣಿಯಾಡಿಯವರ ಲೇಖನದ ಪೂರ್ಣಪಾಠ ಹೀಗಿದೆ -
ದೇಶಾಭಿಮಾನಿಗಳೇ, ಕೆಲವು ವರ್ಷಗಳಿಂದ ತುಳುವರಲ್ಲಿ ಒಂದು ವಿಧವಾದ ಜಾಗೃತಿಯುಂಟಾಗಿ ಅಲ್ಲಲ್ಲಿ ವಾದ-ವಿವಾದಗಳು ಮಾತ್ರ ನಡೆಯುತ್ತಿದ್ದರೂ ಸಂಘಟಿತವಾದ ಯಾವ ಕಾರ್ಯವನ್ನೂ ಉಪಕ್ರಮಿಸಲಿಲ್ಲ. ಅದೇ ಪ್ರಬಲವಾಗಿ ಇತ್ತೀಚೆಗೆ ಜಿಲ್ಲೆಯ ಕೆಲವು ಪತ್ರಿಕೆಗಳಲ್ಲಿ ಕೆಲವು ಲೇಖನಗಳು ಪ್ರಕಟವಾದವು. ಇದರಿಂದ ಸಂಪೂರ್ಣ ಅಂಶಗಳು ಚರ್ಚಿಸಲ್ಪಡದಿದ್ದರೂ ಕೆಲವಂಶಗಳು ಚರ್ಚಿಸಲ್ಪಟ್ಟವು. ಇದರ ಫಲವಾಗಿ ಕೆಲವರಿಗೆ ಸ್ಫೂರ್ತಿಯೂ , ಧೈರ್ಯವೂ ಬಂದು 'ತುಳುವ ಮಹಾಸಭೆ'ಯೆಂಬ ಸಂಸ್ಥೆಯನ್ನು ಡಿಸ್ಟ್ರಿಕ್ಟ್ ಬೋರ್ಡ್ ಮೆಂಬರರಾದ ಡಾಕ್ಟರ್ ಯು. ರಾಮಚಂದ್ರ ರಾಯರ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯವರು ಇದೇ 23-9-1928ರಲ್ಲಿ ಉಡುಪಿಯಲ್ಲಿ ಸ್ಥಾಪಿಸಿದರು. ಇದರ ಕಾರ್ಯಕ್ಷೇತ್ರವು ಉಡುಪಿಯು ಮಾತ್ರವಿರದೆ ಇಡೀ ತುಳುನಾಡು ಕಾರ್ಯಕ್ಷೇತ್ರವಾಗಿದೆ. ಅಂದರೆ ಇದರ ಸಭೆಗಳನ್ನು ತುಳುನಾಡಿನ ಯಾವದೇ ಭಾಗದಲ್ಲಿ ಜರಗಿಸಬಹುದು. ತುಳುನಾಡಿನ ಎಲ್ಲರೂ ಸದಸ್ಯರಾಗಬಹುದು. ಕಾರ್ಯಾಲಯವೂ ಎಲ್ಲಿಗೆ ಬೇಕಾದರೂ ಒಯ್ಯಲ್ಪಡಬಹುದು. ಆದರೆ ಇಂತಹ ಸಂಸ್ಥೆಯ ಆವಶ್ಯಕತೆಯ ವಿಷಯದಲ್ಲಿಯೂ, ಉದ್ದೇಶದ ವಿಷಯದಲ್ಲಿಯೂ ಕೆಲವರಿಗೆ ಸಂದೇಹವೂ, ಕೆಲವರಿಗೆ ಅಪಾರ್ಥಗಳೂ ಉಂಟಾಗಿರುವುದರಿಂದ ಆ ವಿಷಯದಲ್ಲಿ ನಾವು ಸ್ವಲ್ಪ ಪ್ರಸ್ತಾಪನೆಯನ್ನು ಮಾಡುವುದು ಅತ್ಯಗತ್ಯದ ಸಂಗತಿಯಾಗಿದೆ.
'ತುಳುವರು' ಎಂದರೆ ಯಾರು? ತುಳುವರ ವಿಷಯವಾದ ಯಾವ ಮಾತನ್ನೆತ್ತಬೇಕಾದರೂ ಮೊತ್ತಮೊದಲು ತುಳುವರು ಯಾರು ಎಂಬುದನ್ನು ವಿಮರ್ಶೆ ಮಾಡಬೇಕಾಗಿದೆ. ಏಕೆಂದರೆ, ತುಳುವರ ವಿಷಯವಾಗಿ ಅಪಾರ್ಥಗಳು ಅಲ್ಲಲ್ಲಿ ಕಲ್ಪಿಸಲ್ಪಟ್ಟಿವೆ. ತುಳುವರ ವಿಷಯವಾಗಿ ನಿಜವಾದ ಕಲ್ಪನೆಯು ತುಳುನಾಡಿನ ಕೆಲವರಿಗೂ, ತುಳುನಾಡಿನ ಹೊರಗಿನವರಿಗೂ ಇಲ್ಲ. ತುಳುವರೆಂದರೆ ಬ್ರಾಹ್ಮಣರು ಮಾತ್ರ ಎಂಬ ಕೆಲವರ ಕಲ್ಪನೆಯು ಕೇವಲ ನಿರಾಧಾರವಾದದ್ದು. ತುಳುವನ್ನು ಮಾತಾಡುವವರು ಬ್ರಾಹ್ಮಣರು ಮಾತ್ರವಲ್ಲ, ಇತರ ಎಲ್ಲಾ ಜಾತಿಯವರೂ ಇದ್ದಾರೆ. ತುಳುವರೆಂದರೆ ವಿಶಿಷ್ಟ ಜಾತಿಯವರೆಂದು ಕೆಲವರಿಗೆ ಭಾವನೆಯು ಉಂಟು; ಅದು ತೀರಾ ಸುಳ್ಳು. ತುಳುವನ್ನು ಮಾತಾಡುವವರಲ್ಲಿ ಒಂದೆರಡು ಜಾತಿಯವರೇ ಇರದೆ, ಅನೇಕ ಜಾತಿಯವರೂ ಇದ್ದಾರೆ. ಬ್ರಾಹ್ಮಣ, ಬಂಟ, ವಿಶ್ವಕರ್ಮ, ಮೊಗವೀರ, ಬಿಲ್ಲವ, ಹೊಲೆಯ ಮುಂತಾದ ಮುಖ್ಯ ಜಾತಿಗಳೂ, ಇತರ ಅನೇಕ ಜಾತಿಗಳೂ ಇದ್ದಾವೆ. ತುಳುವರೆಂದರೆ ಒಂದೇ ಧರ್ಮದವರೆಂದೂ, ಒಂದೇ ಪಂಥದವರೆಂದೂ ಹೇಳಲಿಕ್ಕೆ ಬರುವಂತಿಲ್ಲ. ಶೈವ, ವೈಷ್ಣವ, ಮಾಧ್ವ, ಭಾಗವತ, ಶಾಕ್ತ, ಜೈನ, ಬೌದ್ಧ, ಕ್ರೈಸ್ತ, ಮಹಮ್ಮದೀಯ ಮುಂತಾದ ಧರ್ಮಗಳೂ, ಪಂಥಗಳೂ ತುಳುವರಲ್ಲಿ ಉಂಟು. ಮತ್ತು ತುಳು ಮಾತನ್ನಾಡುವ ದೇಶವೊಂದು ಬೇರೆಯಿದ್ದು ಅಲ್ಲಿಂದ ಈ ಜನರು ಇಲ್ಲಿಗೆ ಬಂದು ಆವಾಸಮಾಡಿಕೊಂಡು ಇರುವದೂ ಅಲ್ಲ. ಈ ಭೂಭಾಗಕ್ಕೆ ಬಹಳ ಪ್ರಾಚೀನ ಕಾಲದಿಂದಲೂ ತುಳು ಎಂಬ ವ್ಯವಹಾರವಿತ್ತು. ಇಲ್ಲಿ ಮಾತನಾಡುತ್ತಿದ್ದ ಮತ್ತು ಇರುವ ಭಾಷೆಗೆ ತುಳು ಭಾಷೆಯೆಂದೂ ಬಹಳ ಕಾಲದಿಂದ ವ್ಯವಹಾರವಿತ್ತು. ಆದುದರಿಂದಲೇ ತುಳು ದೇಶದಲ್ಲಿದ್ದು, ತುಳು ಭಾಷೆಯನ್ನಾಡುವ ಜನಾಂಗಕ್ಕೆ ತೌಳವ ಅಥವಾ ತುಳುವ ಎಂಬ ವ್ಯವಹಾರವು ಬಂದಿದೆ. ಆದುದರಿಂದಲೇ ಬಹಳ ಪ್ರಾಚೀನ ಕಾಲದಲ್ಲಿ ಇಲ್ಲಿಂದ ಹೋಗಿ ತಮಿಳು ದೇಶದಲ್ಲಿ ನೆಲಸಿದರೂ, ತುಳು ಭಾಷೆಯನ್ನು ಬಿಟ್ಟು ತಮಿಳು ಭಾಷೆಯನ್ನೇ ಆಡುತ್ತಿದ್ದರೂ ತಮಿಳು ದೇಶದಲ್ಲಿರುವ ಅದೊಂದು ಪ್ರಖ್ಯಾತವಾದ ಜಾತಿಯು ಇನ್ನೂ ತುಳುವ ನಲ್ಲಾಳ ಎಂಬ ತಮ್ಮ ಹೆಸರನ್ನು ಮರೆತಿಲ್ಲ. ತುಳುವನ್ನೇ ಮಾತೃಭಾಷೆಯನ್ನಾಗಿಟ್ಟುಕೊಂಡು ಇರುವ ಜನರ ಸಂಖ್ಯೆಯು 1921ನೇ ಇಸ್ವಿ ಖಾನೇಸುಮಾರಿಯಲ್ಲಿ 5,79,342 ಇತ್ತು. ಅವರಲ್ಲಿ 41,517 ಮಾತ್ರ ನಮ್ಮ ಜಿಲ್ಲೆಯನ್ನು ಬಿಟ್ಟು ಬಾಕಿ ಕಡೆಗಳಲ್ಲಿರುವವರು. ಹೆಚ್ಚಾಗಿ ಹಾಸನ, ಕಡೂರು, ಶಿವಮೊಗ್ಗಾ, ಮಲಬಾರ್, ಕೊಚ್ಚಿ, ತ್ರಾವಣಕೋರ್, ಬೊಂಬಾಯಿ, ಮದ್ರಾಸ್‍ಗ ಳಲ್ಲಿರುವವರು. ತುಳುವರ ಸಂಖ್ಯೆಯು ಕಮ್ಮಿಯಾಗುತ್ತಾ ಬರುವದಕ್ಕೆ ಕೆಲವು ಕಾರಣಗಳುಂಟು. 1. ಪರಸ್ಥಳಗಳಿಗೆ ಹೋಗಿ ಆವಾಸಮಾಡುವವರು ಹೆಚ್ಚಾಗಿ ತಮ್ಮ ಮಾತೃಭಾಷೆ ಕನ್ನಡವೆಂದು ಹೇಳುತ್ತಾರೆ. 2. ತುಳುವರೆಂದು ಹೇಳಲಿಕ್ಕೆ ನಾಚಿಕೊಂಡು ಇಲ್ಲಿಯೂ ಕೆಲವರು ಮನೆಯಲ್ಲಿಯೂ ಕನ್ನಡ ಭಾಷೆಯನ್ನೇ ಉಪಯೋಗಿಸಿಕೊಂಡು ಕನ್ನಡಿಗರೆಂದು ಪರಿಗಣಿಸಲ್ಪಡುತ್ತಾರೆ. 3. 'ಬಾಸೆಲ್ ಮಿಶನ್', ಕರ್ನಾಟಕ ಮಿಶನ್' ಎಂದು ಪರಿವರ್ತನೆಯಾದಂದಿನಿಂದ ಮಿಶನರಿಗಳಲ್ಲಿಯೂ ಕೆಲವರು ತುಳು ಭಾಷೆಯನ್ನು ಬಿಟ್ಟು ಕನ್ನಡ ಭಾಷೆಯನ್ನು ಅವಲಂಬಿಸುತ್ತಿದ್ದಾರೆ. 4. ಕೆಥೋಲಿಕ್ ಕ್ರಿಶ್ಚಿಯನ್ ಮತಕ್ಕೆ ಸೇರಿದವರಂತೂ ಸಂಪೂರ್ಣವಾಗಿ ತುಳು ಭಾಷೆಯನ್ನು ಬಿಟ್ಟು ಕೊಂಕಣಿ ಭಾಷೆಯನ್ನೇ ಅವಲಂಬಿಸುತ್ತಾರೆ. 5. ಮಹಮ್ಮದೀಯ ಮತಕ್ಕೆ ಸೇರಿದವರೂ ವಿಶೇಷವಾಗಿ ಹಿಂದೂಸ್ಥಾನೀ ಭಾಷೆಯನ್ನೋ, ಮಲಯಾಳಿ ಭಾಷೆಯನ್ನೋ ಅವಲಂಬಿಸುತ್ತಾರೆ. ಈ ತರದ ವಿಚಿತ್ರ ಸ್ಥಿತಿಗಳಿಂದ ತುಳು ಭಾಷೆಯನ್ನಾಡುವವರ ಸಂಖ್ಯೆಯು ಹೆಚ್ಚಿನ ಅಭಿವೃದ್ಧಿಗೆ ಬಾರದಿದ್ದುದು ಆಶ್ಚರ್ಯವಲ್ಲ. ಆದರೆ ತುಳುನಾಡಿನಲ್ಲಿ ಆವಾಸಮಾಡಿಕೊಂಡು, ಬೇರೆ ಭಾಷೆಗಳನ್ನು ಮಾತಾಡುವವರಿಗೂ ಹೆಚ್ಚಾಗಿ ತುಳು ಭಾಷೆಯು ತಿಳಿದೇ ಇರುವುದು. ಆದುದರಿಂದಲೇ ನಾವು ತುಳುವರೆಂದರೆ ಈಗಿನ ಧೋರಣೆ ಅನುಸರಿಸಿ 1. ತುಳುವೇ ಮಾತೃಭಾಷೆಯಾಗಿ ಉಳ್ಳವರು. 2. ತುಳುವನ್ನು ತಿಳಿದವರು. 3. ತುಳುನಾಡಿನ ಆವಾಸಿಗಳು ಎಂದು ಮೂರು ವಿಧವಾದ ಅರ್ಥವನ್ನು ಮಾಡಿದ್ದೇವೆ. ಅಂದರೆ ತುಳುನಾಡಿನಲ್ಲಿ ಹೆಚ್ಚುಕಮ್ಮಿ 10 ಲಕ್ಷ ಜನರು ಆವಾಸಮಾಡಿಕೊಂಡಿದ್ದಾರೆ. ಆದುದರಿಂದ ತುಳುವರೆಂದರೆ ಕರ್ನಾಟಕ, ಆಂಧ್ರ, ತಮಿಳು, ಬಂಗಾಳಿ, ಗೂರ್ಜರ ಮುಂತಾದ ಶಬ್ಕಗಳಿಗೆ ಅನ್ವಯಿಸಲ್ಪಡುವದರಂತೆಯೇ ಅರ್ಥಮಾಡಬೇಕಷ್ಟೇ ವಿನಹ ಬೇರೆ ಯಾವ ವಿಧವಾದ ಅರ್ಥವನ್ನು ಮಾಡುವುದು ಉಚಿತವಲ್ಲ.

ತುಳುನಾಡು: ಈ ಭೂಭಾಗವು ಈಗಲೀಗ ನಮ್ಮಿಂದ ಕಲ್ಪಿಸಲ್ಪಡುವದಲ್ಲ. ಬಹಳ ಪ್ರಾಚೀನ ಕಾಲದಿಂದಲೂ ನಮ್ಮ ಭೂಭಾಗಕ್ಕೆ ತುಳು ಎಂದು ಹೆಸರಿತ್ತು. ಪ್ರಾಚೀನ ಗ್ರಂಥಳಲ್ಲಿ ಅದರ ಗಡಿಗಳು ಕೂಡಾ ವಿವರಿಸಲ್ಪಟ್ಟಿದ್ದವು. ಆದರೆ ಈಗಿನ ಗಡಿಗಳಿಗೂ ಆಗಿನ ಗಡಿಗಳಿಗೂ ಸ್ವಲ್ಪ ಹೆಚ್ಚುಕಮ್ಮಿ ಬರಲಿಕ್ಕೆ ಸಾಕು. ಅದೊಂದು ದೋಷವಲ್ಲ. ಬಹಳ ಕಾಲದಿಂದಲೂ ತುಳುನಾಡಿನ ವೈಶಿಷ್ಟ್ಯವನ್ನು ತುಳುವರಸರು ಕಾದುಕೊಂಡಿದ್ದರು. ತುಳುನಾಡಿಗೆ ಕೆಲವೆಡೆಯಲ್ಲಿ ಕೊಂಕಣವೆಂಬ ವ್ಯವಹಾರವೂ ಮತ್ತೆ ಕೆಲವೆಡೆ ಕೇರಳವೆಂಬ ವ್ಯವಹಾರವೂ, ಈಗಿನ ಕರ್ನಾಟಕವೆಂಬ ವ್ಯವಹಾರವೂ ತುಳುನಾಡಿನ ತುಳುತ್ವವನ್ನು ಅಪಹರಿಸಲಾರವು. ಕರ್ನಾಟಕದ ಸಾಮ್ರಾಜ್ಯದ ಕೆಳಗೆ ತುಳುನಾಡು ಬಂದ ಮೇಲೆ ತುಳುವರು ತಮ್ಮ ವೈಶಿಷ್ಟ್ಯವನ್ನೂ, ಸಂಸ್ಕೃತಿಯನ್ನೂ ಕಾಪಾಡಿಕೊಂಡಿದ್ದರೂ, ಬ್ರಿಟಿಷರ ಆಳಿಕೆ ಬಂದ ಮೇಲೆ ಕರ್ನಾಟಕ ಧೋರಣವೇ ಹೆಚ್ಚಾಗಿ, ಮೊದಲು ಕನ್ನಡ ಜಿಲ್ಲೆಯೆಂದೂ, ಈಗಿನ ದಕ್ಷಿಣ ಕನ್ನಡ ಜಿಲ್ಲೆಯೆಂದೂ ವ್ಯವಹಾರ ಬಂದು, ಇಲ್ಲಿಯ ಸ್ಥಿತಿಗತಿಗಳನ್ನು ನೋಡಿ ತಿಳಿದುಕೊಳ್ಳುವವರಿಗೆ ಇದು 'ಕರ್ನಾಟಕ'ವೆಂಬ ಬೋಧವಾಗುವುದು ಹೆಚ್ಚಿನ ಆಶ್ಚರ್ಯದ ಸಂಗತಿಯಲ್ಲ. ಹಾಗೆಯೇ ಪಶ್ಚಿಮ ಕರಾವಳಿಯ ಏಳು ವಿಭಾಗಗಳನ್ನೂ ಒಂದು ಕಡೆ ಕೊಂಕಣವೆಂದೂ, ಮತ್ತೊಂದು ಕಡೆ ಕೇರಳವೆಂದೂ ಉಲ್ಲೇಖಿಸಿದ್ದು ಕೇರಳ ಕೊಂಕಣಗಳ ಅಭಿಮಾನಿಗಳಿದ್ದಿರಬಹುದು. ಅಥವಾ ಆಯಾ ಉಲ್ಲೇಖಗಳ ಸಮಯದಲ್ಲಿ ಕೊಂಕಣ ಸಾಮ್ರಾಜ್ಯಾಂತರ್ಗತವಾಗಿಯೂ, ಕೇರಳ ಸಾಮ್ರಾಜ್ಯಾಂತರ್ಗತವಾಗಿಯೂ ಇದ್ದಿರಬಹುದೆಂದು ಊಹಿಸಬಹುದು. ಆದರೂ ಆ ಎರಡು ಉಲ್ಲೇಖಗಳು 'ತುಳು' ದೇಶದ ಅಸ್ತಿತ್ವವನ್ನು ಅಲ್ಲಗಳೆಯುವುದಿಲ್ಲ. ಈ ವಿಷಯದಲ್ಲಿ ಹೆಚ್ಚಿನ ವಿವರವು ಇಲ್ಲಿ ಅಗತ್ಯವಿಲ್ಲದಿರುವುದರಿಂದ 'ತುಳುನಾಡು' ಎಂಬ ಭೂಭಾಗವು ಅದೇ ಹೆಸರಿಂದ ಬಹಳ ಪ್ರಾಚೀನ ಕಾಲದಿಂದಲೂ ಇತ್ತೆಂದೂ, ಕರ್ನಾಟಕ-ಕೊಂಕಣ-ಕೇರಳಗಳಲ್ಲಿ ಸೇರಿದ್ದಲ್ಲವೆಂದೂ ಸಿದ್ಧಾಂತವನ್ನು ಮಾತ್ರ ಹೇಳುವೆವು. ತುಳುನಾಡಿನ ಅಸ್ತಿತ್ವವು ನೆರೆಕರೆಯ ದೇಶಗಳಂತೆ ಬಹಳ ಪ್ರಾಚೀನ ಕಾಲದಿಂದಲೂ ಇತ್ತೆಂಬುದು ನಿರ್ವಿವಾದ.
ತುಳು ಭಾಷೆ: ತುಳು ಭಾಷೆಯು ತುಳು ದೇಶ, ತುಳುವರಷ್ಟೇ ಪ್ರಾಚೀನ ಭಾಷೆಯಾಗಿದೆ. ತುಳು ಭಾಷೆಯೆಂದರೆ ಕರ್ನಾಟಕದ ಅಪಭ್ರಂಶವೆಂದು ಕಲ್ಪನೆ ತೀರಾ ನಿರಾಧಾರವಾದದ್ದು. ದ್ರಾವಿಡ ಭಾಷೆಗಳ ಚರಿತ್ರೆಯನ್ನು ವಿಮರ್ಶಿ ಸಿದರೂ, ಭಾಷಾಶಾಸ್ತ್ರ ದೃಷ್ಟಿಯಿಂದ ವಿಮರ್ಶಿ ಸಿದರೂ, ತುಳು ಭಾಷೆಯು ಯಾವದರ ಅಪಭ್ರಂಶವಲ್ಲವೆಂದೂ, ತಮಿಳು-ಕರ್ನಾಟಕ -ಆಂಧ್ರ-ಮಲಯಾಳಗಳಂತೆಯೇ ಸ್ವತಂತ್ರ ಭಾಷೆಯೆಂದೂ, ಎಲ್ಲವೂ ಮೂಲ ದ್ರಾವಿಡ ಭಾಷೆಯಿಂದ ಉಂಟಾದದ್ದೆಂದೂ ಭಾಷಾತತ್ವ ವಿಮರ್ಶಕರಿಗೆ ತಿಳಿಯದ ವಿಷಯವಲ್ಲ. ಇದೂ ಅಲ್ಲದೆ ಉಚ್ಚಾರಣೆಯ ಭೇದದಿಂದ ಒಂದೇ ಶಬ್ದಕ್ಕೆ ಅರ್ಥಭೇದವು ಬರುವ ವೈಚಿತ್ರ್ಯವನ್ನು ನೋಡಿದರೆ ತುಳು ಭಾಷೆಯ ವೈಶಿಷ್ಟ್ಯವು ಕಂಡುಬರುವುದು. ತುಳು ಭಾಷೆಯನ್ನು ಶಾಸ್ತ್ರೀಯ ದೃಷ್ಟಿಯಿಂದ ಕಲಿಯದ ವಿನಹ ಅದರ ಸ್ವಾರಸ್ಯವು ಕಂಡುಬರಲಿಕ್ಕಿಲ್ಲ. ಇನ್ನು ತುಳು ಭಾಷೆಯ ಸಾಹಿತ್ಯ ವಿಚಾರದಲ್ಲಿ ಪ್ರಕೃತಕ್ಕೆ ಇತ್ತಲಾಗಿನ ಕೆಲವು ಗ್ರಂಥಗಳಲ್ಲದೆ ಬೇರೆ ಯಾವುದೂ ಸಿಕ್ಕುವುದಿಲ್ಲ. ಇದರ ಪ್ರಾಚೀನ ಸಾಹಿತ್ಯದ ವಿಷಯದಲ್ಲಿ ಭಾಷಾಶಾಸ್ತ್ರಕಾರರಲ್ಲಿ ಮತಗಳು ಭಿನ್ನವಾಗಿವೆ. ಅದು ಹೇಗೂ ಇರಲಿ. ಲಿಪಿಯ ಮಟ್ಟಿಗೆ ತುಳು ಲಿಪಿಯೆಂಬುದು ಪ್ರತ್ಯೇಕವೇ ಉಂಟು. ಕನ್ನಡ-ತೆಲುಗು ಲಿಪಿಗಳಿಗೆ ಇರುವಷ್ಟೇ ಭೇದವು ತುಳು-ಮಲಯಾಳ ಲಿಪಿಗಳಿಗೆ ಇರುವುದು, ಮಾತಾಡುವ ಜನಸಂಖ್ಯೆ ದೃಷ್ಟಿಯಿಂದ ಹಿಂದೂಸ್ಥಾನದ ಭಾಷೆಗಳಲ್ಲಿ ತುಳು ಭಾಷೆಯು 21ನೆಯ ಸ್ಥಾನವನ್ನು ಹೊಂದುತ್ತದೆ. ಹಿಂದಿನ ಸಾಹಿತ್ಯವು ದೊರೆಯದಿರುವ ಕಾರಣದಿಂದ ಮುಂದೆ ಸಾಹಿತ್ಯವನ್ನು ಅಭಿವೃದ್ಧಿ ಮಾಡಬಾರದು ಎಂಬುದಕ್ಕೆ ಯಾವ ಆಧಾರವೂ ಇಲ್ಲ. ಇನ್ನೂ ಮೇಲೆ ಹೇಳಿದ ವಿಚಾರಗಳಲ್ಲಿ ವಿಚಾರಣೀಯಗಳಾದ ಎಷ್ಟೋ ಸಂಗತಿಗಳಿಂದ ವಿಚಾರಿಸುವ.

ತುಳುವರ ಸದ್ಯ:ಸ್ಥಿತಿ: ತುಳುವರು ತಮ್ಮ ಸರ್ವಸ್ವವನ್ನು ಕಳಕೊಂಡುದರಿಂದ ಅವರಲ್ಲಿ ಸ್ವಾಭಿಮಾನದ ಚಿಹ್ನೆಯೇ ಇಲ್ಲವಾಗಿದೆ. ಮನೆಯಲ್ಲಾಡುವ ಭಾಷೆ ಒಂದು, ಹೊರಗೆ ವ್ಯವಹಾರ ಮಾಡಬೇಕಾದುದೊಂದು, ಈ ಪ್ರಕಾರ ಭಾಷಾಭೇದ ಬಂದುದರಿಂದ ಎಷ್ಟೋ ತುಳುವರು ಸಾರ್ವಜನಿಕ ಸಂಸ್ಥೆಗಳಲ್ಲಿ ತಮ್ಮ ಅಭಿಪ್ರಾಯವನ್ನು ಪ್ರಕಟಿಸಲು ಅಸಮರ್ಥರಾಗಿರುತ್ತಾರೆ. ಅದರಿಂದ ಎಷ್ಟೋ ಪ್ರಮಾದಗಳು ಸಂಭವಿಸಿ ಹೋಗುತ್ತವೆ. ಸಾರ್ವಜನಿಕ ಸಂಸ್ಥೆಗಳಲ್ಲಿಯೂ ಇಂಗ್ಲಿಷಿನಲ್ಲಿಯೊ, ಕನ್ನಡದಲ್ಲಿಯೊ ಭಾಷಣಗಳನ್ನೂ, ಚರ್ಚೆಗಳನ್ನೂ ನಡೆಸುವುದರಿಂದ ಅನೇಕ ತುಳುವರಿಗೆ ಅರ್ಥವಾಗದೇನೇ ಹೋಗುತ್ತದೆ. ಎಲ್ಲರೂ ಕನ್ನಡವನ್ನು ಕಲಿತವರಾಗಿಲ್ಲ; ಸ್ವಲ್ಪ ಕಲಿತವರಿಗೂ ತಿಳಿಯುವಂಥಾದ್ದಲ್ಲ, ಹೀಗಾಗಿ ತುಳುವರಿಗೆ ಆಗುವ ಕಷ್ಟವೂ, ನಷ್ಟವೂ ಅಷ್ಟಿಷ್ಟಲ್ಲ, ಅಂತಹ ಸಂದರ್ಭಗಳಲ್ಲಿ ತುಳು ಭಾಷೆಯನ್ನು ಉಪಯೋಗಿಸುವುದು ಕೂಡ ತಪ್ಪೆಂಬ ಕಲ್ಪನೆಯೂ ಕೂಡ ಅನೇಕ ತುಳುವರಿಗೆ ಬಂದುಹೋಗಿದೆ. ಇಡೀ ನಮ್ಮ ನಾಡಿನಲ್ಲಿ ಕಾಂಗ್ರೆಸ್ ಚಳವಳ ಒಂದನ್ನು ಬಿಟ್ಟರೆ, ಸಾರ್ವಜನಿಕವಾದ ಸಂಸ್ಥೆಯು ಬೇರೆ ಯಾವುದೂ ಇಲ್ಲ. ಬೇಂಕ್, ಸೊಸೈಟಿ ಮುಂತಾದವುಗಳನ್ನು ಬಿಟ್ಟರೆ ಒತ್ತಟ್ಟಿಗೆ ಸೇರುವುದೇ ಅಸಂಭವವಾಗಿದೆ. ಕಾಂಗ್ರೆಸ್ ಚಳವಳವು ಕೇವಲ ರಾಜಕೀಯವಾಗಿರುವುದರಿಂದ ಅಭಿಪ್ರಾಯಭೇದಗಳಿಂದಲೂ, ಇನ್ನಿತರ ಕಾರಣಗಳಿಂದಲೂ ಎಲ್ಲರೂ ಸೇರುವುದಿಲ್ಲ. ಸಾಲದಿದ್ದುಕ್ಕಾಗಿ ಜಾತಿವಾರು ಸಂಸ್ಥೆಗಳು ಅನೇಕವಿದ್ದು, ಅವುಗಳು ಎಲ್ಲ ತುಳುವರನ್ನು ಆದಷ್ಟು ಬೇರೆ ಬೇರೆಯಾಗಿ ಇರಿಸಲಿಕ್ಕಾಗಿ ಸಾಧಕವಾಗಿವೆ. ತಾವು ಕರ್ನಾಟಕರೆಂಬ ಬೋಧೆಯಾಗುವುದು ಅಸಾಧ್ಯವಾದುದರಿಂದಲೂ, ತುಳುವರಾಗಿ ಯಾವ ಚಳವಳವನ್ನೂ ಮಾಡಲಿಕ್ಕಿಲ್ಲದಿದ್ದುದರಿಂದಲೂ ತ್ರಿಶಂಕು ಸ್ವರ್ಗದಲ್ಲಿದ್ದಂತೆ ಇದ್ದಾರೆ. ಆದುದರಿಂದ ತುಳುವರಾಗಿ ಯಾವ ಚಳವಳವನ್ನೂ ಮಾಡಲಿಕ್ಕೆ ಬರುತ್ತದೆಂದೂ, ತುಳು ಭಾಷೆಯಲ್ಲಿಯೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೆ ಅಸಭ್ಯವಾಗುವುದಿಲ್ಲವೆಂದೂ ತಿಳಿಸುವುದು ಆದ್ಯ ಕರ್ತವ್ಯವಾಗಿದೆ. ತುಳುವರಿಗೆ ತಮಿಳರಿಂದಲೂ, ಕರ್ನಾಟಕರಿಂದಲೂ ಸಿಕ್ಕುವ ಆದರಾಭಿಮಾನಿಗಳು ಮತ್ತು ಸಮತಾಬುದ್ಧಿಯ ಅವರವರ ಕೂಡೆ ಒಡನಾಟ ಮಾಡಿದವರಿಗೆ ಮಾತ್ರ ಗೊತ್ತು. ಎಷ್ಟೇ ಯೋಗ್ಯತೆಯಿದ್ದರೂ ತುಳುವನೆಂಬ ಕಾರಣದಿಂದ ಮಾತ್ರ ಎಷ್ಟೋ ಸಲ ಕಷ್ಟಪಡಬೇಕಾಗುತ್ತದೆ. ಇದಕ್ಕೆ ಮೂಲಕಾರಣವು ತುಳುವರು ಅಸಂಘಟಿತರಾಗಿರುವುದೂ, ಸ್ವಾಭಿಮಾನ ಶೂನ್ಯರಾಗಿರುವುದೂ ಆಗಿದೆ. ಆದುದರಿಂದ ತಾವು ತುಳುವರು ತುಳುನಾಡಿನಲ್ಲಿ ತುಳು ಭಾಷೆಯಿಂದಲೇ ಸಾರ್ವಜನಿಕ ಕಾರ್ಯಗಳನ್ನೂ, ಸಂಸ್ಥೆಗಳನ್ನೂ ನಡೆಯಿಸುವುದು ನ್ಯಾಯವೆಂಬ ಸ್ವಾಭಿಮಾನವು ತುಳುವರಲ್ಲಿ ಮೊತ್ತಮೊದಲು ಬರುವಂತೆ ಮಾಡುವುದೂ, ತುಳುವರಲ್ಲಿ ಸಂಘಟನಾಶಕ್ತಿಯನ್ನು ಹುಟ್ಟಿಸುವುದೂ ಆದ್ಯ ಕರ್ತವ್ಯವಾಗಿದೆ. ಇಂತಹ ಅಭಿಮಾನವನ್ನು ಹುಟ್ಟಿಸಬೇಕಾದರೆ ಮೊದಲು ತುಳುವರು ತುಳುನಾಡು ನಿವಾಸಿಗಳೆಂದೂ, ದಕ್ಷಿಣ ಕನ್ನಡದವರಲ್ಲವೆಂದೂ ತಿಳಿಸಬೇಕಾಗಿದೆ. ಈ ತರದ ಯೋಗ್ಯ ಚಳವಳವನ್ನು ಹೂಡಲಿಕ್ಕೆ ತುಳುವರ ಸಂಸ್ಥೆಯು ಅತ್ಯಗತ್ಯವಾದುದರಿಂದಲೇ ನಮ್ಮ ಸಂಸ್ಥೆಯು ಜನ್ಮವೆತ್ತಿರುವುದು. ಕರ್ನಾಟಕ ಪ್ರಾಂತ್ಯದಲ್ಲಿ ತುಳುವರನ್ನು ತುಳುವರನ್ನಾಗಿಯೇ ಇಟ್ಟುಕೊಂಡು ಮುಂದರಿಸುವುದು ಶ್ರೇಯಸ್ಕರವೇ ಹೊರತು, ತುಳುವರನ್ನು ಕನ್ನಡಿಗರನ್ನಾಗಿ ಮಾರ್ಪಡಿಸಿ ಇರಿಸುವುದರಿಂದ ತುಳುವರಿಗೂ, ಕರ್ನಾಟಕಪ್ರಾಂತಕ್ಕೂ ಹಾಗೆಯೇ ಇಡೀ ಭಾರತ ಭೂಮಿಗೂ ಶ್ರೇಯಸ್ಸಿಲ್ಲ.

ನಮ್ಮ ಧ್ಯೇಯ: ನಮ್ಮ ಸಂಸ್ಥೆಯ ಧ್ಯೇಯವನ್ನು ಸ್ಪಷ್ಟವಾಗಿ ಹೇಳುವುದರಿಂದ ಜನತೆಯಲ್ಲಿ ಬೇರೆ ಕಲ್ಪನೆಗಳಿಗೆ ಅವಕಾಶ ಬರಲಿಕ್ಕಿಲ್ಲ. ತುಳು ಭಾಷೆಯ ಈಗಿನ ದುರವಸ್ಥೆಯನ್ನು ಹೋಗಲಾಡಿಸಿ, ತುಳು ಭಾಷೆಯು ಸಾರ್ವಜನಿಕ ಸಂಸ್ಥೆಗಳಲ್ಲಿಯೂ, ಕಾರ್ಯಗಳಲ್ಲಿಯೂ ವ್ಯವಹಾರ್ಯವಾಗುವಂತೆ ಅದರ ಸ್ಥಿತಿಯನ್ನು ತಂದಿರಿಸುವುದು. ಇದಕ್ಕೆ ಬೇಕಾದ ಸಾಧನಗಳನ್ನು ಹುಡುಕಿ ಅದನ್ನು ಉಪಯೋಗಿಸುವುದು. ತುಳುನಾಡು ಭೂಭಾಗಕ್ಕೆ ಈಗಿರುವ ಹೆಸರನ್ನು ತೆಗೆದು ತುಳುನಾಡು ಎಂದು ಹೆಸರನ್ನು ಇಡಿಸುವುದು. ಇದಕ್ಕೆ ಕೆಲವು ಮಟ್ಟಿನ ಪ್ರತಿಬಂಧಕಗಳಿರುವುವು. ಈಗಿನ ರಾಜಕೀಯ ವಿಭಾಗದಂತೆ ದಕ್ಷಿಣ ಕನ್ನಡ ಜಿಲ್ಲೆಯು ಸಂಪೂರ್ಣವಾಗಿ ತುಳುನಾಡು ಅಲ್ಲ. ಉತ್ತರದಲ್ಲಿ ಕರ್ನಾಟಕಭಾಗವೂ, ದಕ್ಷಿಣದಲ್ಲಿ ಮಲಯಾಳದ ಭಾಗವೂ ಸೇರಿಕೊಂಡಿದೆ. ಮಲಯಾಳದ ಭಾಗವನ್ನು ಮಲಯಾಳಕ್ಕೆ ಬಿಟ್ಟುಕೊಟ್ಟು, ಕರ್ನಾಟಕ ಭಾಗವನ್ನು ಈಗಿನ ಉತ್ತರ ಕನ್ನಡ ಜಿಲ್ಲೆಗೆ ಸೇರಿಸಬೇಕಾಗಿದೆ. ಇದು ಕಠಿಣ ಪ್ರಸಂಗವಾದರೂ ಪ್ರಯತ್ನಪಟ್ಟು ಸಾಧಿಸಿಯೇ ತೀರಬೇಕು. ಮೊತ್ತಮೊದಲು ಗಡಿಗಳನ್ನು ನಿಶ್ಚಯಮಾಡುವುದರಲ್ಲಿಯೇ ಅನೇಕ ತೊಂದರೆಗಳು ಉಂಟು. ಈಗಿನ ಪ್ರಾಂತಗಳ ವಿಭಾಗದಲ್ಲಿ ಎಷ್ಟು ತೊಂದರೆಗಳು ಇವೆಯೋ, ಅಷ್ಟೇ ಉಂಟು. ಒಂದೇ ಪ್ರಾಂತದ ಅಧಿಕಾರವಾದರೆ ಸ್ವಲ್ಪ ಸುಲಭವಿತ್ತು. ಈಚೆಗೆ ಬೊಂಬಾಯಿ ಆಚೆಗೆ ಮದ್ರಾಸ್ ಈ ಪ್ರಕಾರ ಎರಡು ಪ್ರಾಂತಗಳ ಸಹಾಯವೂ ಬೇಕಾಗಿದೆ. ಆದರೂ ಸಾಹಸಪಟ್ಟರೆ ಈ ಕೆಲಸವನ್ನು ಸಾಧಿಸಿಯೇ ಸಾಧಿಸಬಹುದು. ಸೂಕ್ಷ್ಮವಾಗಿ ಹೇಳುವುದಾದರೆ ನಮ್ಮ ಈಗಿನ ಮುಖ್ಯ ಧ್ಯೇಯಗಳು 1. ತುಳುವರ ಸಂಘಟನೆ 2. ತುಳುಭಾಷೆಯನ್ನು ಅಭಿವೃದ್ಧಿಗೊಳಿಸುವುದು 3. ತುಳುನಾಡಿನ ಪುನ:ಸ್ಥಾಪನೆ.

ಪ್ರಾಂತ ರಚನೆ: ಈಗಿರುವ ಪ್ರಾಂತಗಳು ಮುಂದೆಯೂ ಹೀಗಿರದೆ ಹೆಚ್ಚು ಕಮ್ಮಿಯಾಗುವುದೆಂಬುದು ಪ್ರತಿಯೊಬ್ಬ ರಾಜಕೀಯ ವಿಚಾರಿಗೂ ಗೊತ್ತಿದ್ದದ್ದೆ. ಮುಂದಿನ ಪ್ರಾಂತಗಳ ರಚನೆಯಲ್ಲಿ ತುಳುವರು ಯಾವ ಭಾಗವನ್ನು ತೆಗೆದುಕೊಳ್ಳಬೇಕು ಎಂಬ ಪ್ರಶ್ನೆಗೆ ನಿರ್ಧಾರಿತ ಉತ್ತರವನ್ನು ಕೊಡುವ ಸ್ಥಿತಿಯಲ್ಲಿಲ್ಲ. ಈ ತರಹದ ಮಾರ್ಗವನ್ನೇ ಅವಲಂಬಿಸಬೇಕು ಎಂಬುದನ್ನು ನಾವು ಸಂಸ್ಥೆಯ ಧ್ಯೇಯವನ್ನಾಗಿಟ್ಟುಕೊಳ್ಳಲಿಲ್ಲ. ವಿಚಾರಮಾಡಿ ಯಾವುದರಿಂದ ನಮಗೆ ಶ್ರೇಯಸ್ಸುಂಟಾದೀತೊ, ಯಾವುದು ಸಾಧ್ಯವೂ, ವ್ಯವಹಾರ್ಯವೂ ಆಗುವ ಸಂಭವವುಂಟೋ ಅದನ್ನೇ ನಿಶ್ಚಯಿಸುವೆವು. ಆದರೆ ಈ ಚಳವಳಕ್ಕೆ ಸಂಬಂಧಪಟ್ಟವರಲ್ಲಿ ಭಿನ್ನಾಭಿಪ್ರಾಯಗಳು ಇರುವುದರಿಂದ ಆ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕಾಗಿದೆ.
1. ತುಳುನಾಡನ್ನು ಪ್ರತ್ಯೇಕವಾಗಿಯೇ ಇಟ್ಟು, ಕಮಿಶನರವರ ಪ್ರಾಂತವನ್ನು ಮಾಡಬೇಕು. ಈ ಪಕ್ಷದವರಲ್ಲಿ ಹೈಕೋರ್ಟಿನ ಮಟ್ಟಿಗೂ, ವಿಶ್ವವಿದ್ಯಾಲಯದ ಮಟ್ಟಿಗೂ ಪ್ರಕೃತ ಬೇರೆ ಯಾವುದಾದರೊಂದು ಪ್ರಾಂತದಲ್ಲಿ ಸೇರಬೇಕು ಎಂಬ ಅಭಿಪ್ರಾಯವೂ ಉಂಟು.
2. ತುಳುನಾಡು ಎಂಬುದನ್ನು ಜಿಲ್ಲೆಯಾಗಿಟ್ಟುಕೊಂಡು ಕರ್ನಾಟಕ ಪ್ರಾಂತಕ್ಕೇನೇ ಸೇರಿಸಬೇಕು. ಅಂದರೆ ತುಳುನಾಡು ತನ್ನ ಸಂಸ್ಕೃತಿ ಮಟ್ಟಿಗೂ, ಶಿಕ್ಷಣದ ಮಟ್ಟಿಗೂ ಸ್ವಾತಂತ್ರ್ಯವನ್ನಿಟ್ಟುಕೊಂಡು ಬಾಕಿ ಎಲ್ಲಾ ಪ್ರಾಂತಿಕ ವ್ಯವಹಾರಗಳ ಮಟ್ಟಿಗೆ ಕರ್ನಾಟಕ ದೊಟ್ಟಿಗೇ ಸೇರಿ ಇರಬೇಕು. ತುಳುನಾಡೆಂದರೆ ಕರ್ನಾಟಕ ಪ್ರಾಂತಕ್ಕೆ ಸೇರಿದ ಒಂದು ಜಿಲ್ಲೆಯಾಗಿರಬೇಕೆಂಬುದೇ ತತ್ವ.
3. ಸಂಯುಕ್ತ ಪ್ರಾಂತದ ರಚನೆ ಮಾಡಬೇಕೆಂಬುದು ಮೂರನೆಯ ಪಕ್ಷ. ಕೊಡಗು, ಬ್ರಿಟಿಷ್ ಮಲಬಾರ್, ತುಳುನಾಡು ಎಂಬವುಗಳನ್ನು ಸೇರಿಸಿ ಪಶ್ಚಿಮ ಕರಾವಳಿಯ ಸಂಯುಕ್ತ ಪ್ರಾಂತ (United Provinces of West Coast)ವನ್ನು ರಚನೆ ಮಾಡಬೇಕು ಎಂದು. ಈ ಪಕ್ಷದವರ ಮತದಲ್ಲಿ ಶಿಕ್ಷಣದ ಮಟ್ಟಿಗೆ ಮೂರು ಪ್ರಾಂತದವರೂ ತಮ್ಮತಮ್ಮ ಸ್ವಾತಂತ್ರ್ಯವನ್ನಿಟ್ಟುಕೊಂಡು ಬಾಕಿ ಎಲ್ಲಾ ಪ್ರಾಂತಿಕ ವ್ಯವಹಾರಗಳಿಗೂ ಒಟ್ಟಾಗಿರಬೇಕೆಂದು.
ಈ ತರಹ ಭಿನ್ನಾಭಿಪ್ರಾಯಗಳು ನಮ್ಮೊಳಗೆ ಈಗಲೇ ಇರುವುದರಿಂದ ಇದರ ಯೋಗ್ಯತಾಯೋಗ್ಯತೆಗಳನ್ನೂ, ವ್ಯವಹಾರ್ಯತೆಯನ್ನೂ, ಶ್ರೇಯಸ್ಸನ್ನೂ ವಿಚಾರಿಸಿ, ಇಂಥಾದ್ದೇ ಬೇಕೆಂದು ನಿರ್ಧರಿಸುವ ವಿಷಯವು ಇಡೀ ತುಳುನಾಡಿನ ಜನತೆಗೇ ಸೇರಿಯದೆ. ಆದುದರಿಂದ ನಮ್ಮ ಸಂಸ್ಥೆಯು ಪ್ರಕೃತ ಯಾ ಅಭಿಪ್ರಾಯವನ್ನೂ ಇಟ್ಟುಕೊಳ್ಳದೆ ಎಲ್ಲರಿಗೂ ಸಮ್ಮತವಾದ ಧ್ಯೇಯವನ್ನೇ ಇಟ್ಟುಕೊಂಡಿದೆ.
ಎರಡು ಸಂಘಗಳ ಆವಶ್ಯಕತೆ: ಭಾಷಾಭಿವೃದ್ಧಿಯನ್ನು ಮಾಡಲಿಕ್ಕೆ ಪ್ರತ್ಯೇಕ ಒಂದು ಸಂಸ್ಥೆಯೂ, ತುಳುನಾಡಿನ ಪುನಃಸ್ಥಾಪನೆಯನ್ನು ಮಾಡಲಿಕ್ಕೆ ಪ್ರತ್ಯೇಕ ಒಂದು ಸಂಸ್ಥೆಯೂ ಅತ್ಯಾವಶ್ಯಕವೆಂಬುದು ನಮಗೆ ಗೊತ್ತಿಲ್ಲದಲ್ಲ. ಆದರೆ ಪ್ರಕೃತ ಪರಿಸ್ಥಿತಿಯಲ್ಲಿ ಎರಡು ಸಂಸ್ಥೆಗಳನ್ನು ಹುಟ್ಟಿಸಿ ಕೆಲಸಮಾಡುವುದು ಕಠಿಣವಾದುದರಿಂದ ಒಂದೇ ಸಂಸ್ಥೆಯನ್ನು ಮಾಡಿದ್ದೇವೆ. ಕೆಲಸಗಾರರು ಮುಂದೆ ಬಂದೊಡನೆಯೇ ಆದಷ್ಟು ಬೇಗ ಸಾಹಿತ್ಯ ಸಂಸ್ಥೆಯನ್ನು ಬೇರೆ ಮಾಡುವೆವು. ಇದರಲ್ಲಿ ಸಾಹಿತ್ಯಪ್ರೇಮಿಗಳು ಮಾತ್ರ ಸೇರುವುದರಿಂದ ತುಳು ಭಾಷಾ ವಿಷಯಕವಾದ ಕಾರ್ಯವು ಸೊಗಸಾಗಿ ನಡಿಯುವುದು.
ವಿನಂತಿ: ಈ ಪ್ರಕಾರದ ಪರಿಸ್ಥಿತಿಯನ್ನು ವಿಚಾರಮಾಡಿ ಅನೇಕರ ಸಹಾಯದಿಂದಲೂ, ಅಪೇಕ್ಷೆಯಿಂದಲೂ ನಾವು ಈ 'ತುಳುವ ಮಹಾಸಭೆ' ಎಂಬ ಸಂಸ್ಥೆಯನ್ನು ಸುರುಮಾಡಿದ್ದೇವೆ. ಇದು ಉಡುಪಿಯಲ್ಲಿ ಸ್ಥಾಪಿಸಲ್ಪಟ್ಟಿದ್ದರೂ ಇದರ ಕಾರ್ಯಕ್ಷೇತ್ರವು ಇಡೀ ತುಳುನಾಡೇ ಆಗಿಯದೆ. ಯಾವ ಕಡೆಯ ತುಳುವರೂ ಸೇರಬಹುದು. ಕೆಲಸಗಾರರು ಹೆಚ್ಚಿದ್ದಲ್ಲಿ ಕಾರ್ಯಾಲಯವನ್ನು ಮಹಾಸಭೆಯ ಅನುಮತಿ ಪ್ರಕಾರ ಎಲ್ಲಿಗೆ ಬೇಕಾದರೂ ಒಯ್ಯಬಹುದು. ಶಾಖೆಗಳನ್ನಾದರೂ ಮಹಾಸಭೆಯ ಅನುಮತಿ ಮೇರೆಗೆ ಸ್ಥಾಪಿಸಬಹುದು. ಆದುದರಿಂದ ಎಲ್ಲಾ ತುಳುವರೂ ಈ ಸಂಸ್ಥೆಗೆ ಸೇರಿ, ಇದನ್ನು ಬಲಪಡಿಸಿ, ಇದರ ಧ್ಯೇಯಗಳನ್ನು ಸಾಧಿಸಬೇಕು. ಈ ಸಂಸ್ಥೆಯ ನಿಯಮಗಳಲ್ಲಾಗಲೀ ಅಥವಾ ಬೇರೆ ಯಾವ ವಿಷಯಗಳಲ್ಲೇ ಆಗಲೀ, ಬೇಕಾದ ಸೂಚನೆಗಳನ್ನು ಕೊಟ್ಟರೆ ಅದನ್ನು ಮುಂದಿನ ಮಹಾಸಭೆಯ ಅಧಿವೇಶನದಲ್ಲಿ ಇಡುವೆವು. ಆದುದರಿಂದ ತುಳುವರು ತಮ್ಮ ಕರ್ತವ್ಯಗಳನ್ನು ಮಾಡಲಿಕ್ಕೆ ಹಿಂಜರಿಯುವುದಿಲ್ಲವೆಂದು ನಂಬಿದ್ದೇವೆ. ನಮ್ಮ ಜಿಲ್ಲೆಯ ಮಾಹಿತಿಯು ಕೆಲಮಟ್ಟಿಗೆ ಪ್ರತಿಯೊಬ್ಬ ವಿಚಾರಿಗೂ ಅತ್ಯಗತ್ಯವಿದ್ದುದರಿಂದ ಕೆಲವು ಅಂಕೆಗಳನ್ನು ಇದರ ಸಂಗಡ ಕೊಟ್ಟಿರುವೆವು. ( - ಎಸ್. ಯು. ಪಣಿಯಾಡಿ, An Appeal, Tuluva Mahasabha, Udupi - 1928).

ಪಣಿಯಾಡಿಯವರು ಬರೆದಿರುವ 'ತುಳುವ ಮಹಾಸಭೆ'ಯ ವಿಜ್ಞಾಪನೆ ಒಂದು ಚಾರಿತ್ರಿಕ ದಾಖಲೆ. ಇದರಲ್ಲಿ ತುಳುನಾಡಿನ ಗಡಿ, ಸ್ವತಂತ್ರ ತುಳು ರಾಜ್ಯ - ಈ ವಿಷಯಗಳನ್ನು ಕುರಿತ ಬೇರೆ ಬೇರೆ ಅಭಿಪ್ರಾಯಗಳಿವೆ. ಈ ಅಭಿಪ್ರಾಯಗಳನ್ನು ಮಂಡಿಸುವ ಪಣಿಯಾಡಿಯವರು ಪ್ರಜಾಪ್ರಭುತ್ವವಾದಿಯಾಗಿ ಕಾಣಿಸುತ್ತಾರೆ. ತುಳು ಚಳವಳ ಆಕ್ರಮಣಕಾರಿಯಾಗದೆ, ಆತ್ಮವಿಶ್ವಾಸದಿಂದ ಹೇಗೆ ಮುಂದುವರಿಯಬೇಕು ಎಂಬುದರ ಕುರಿತು ಪಣಿಯಾಡಿಯವರು ಸರಿಯಾದ ಮಾರ್ಗದರ್ಶನ ನೀಡಿದ್ದಾರೆ.
ತುಳುವರು ಯಾರು ಎಂದು ವ್ಯಾಖ್ಯಾನಿಸಿರುವುದರಲ್ಲಿ 'ತುಳುವ ಮಹಾಸಭೆ'ಯ ಆಡಳಿತ ಮಂಡಳಿಯವರ, ಪಣಿಯಾಡಿಯವರ ದೊಡ್ಡತನ ಕಾಣಿಸುತ್ತದೆ - 1. ತುಳುವೇ ತಾಯ್ನುಡಿಯಾಗಿರುವವರು 2. ತುಳು ಭಾಷೆ ತಿಳಿದಿರುವವರು 3. ತುಳುನಾಡಿನಲ್ಲಿ ವಾಸಿಸುತ್ತಿರುವವರು.

ಪೊಳಲಿ ಶೀನಪ್ಪ ಹೆಗ್ಡೆ, ಮೋಹನಪ್ಪ ತಿಂಗಳಾಯ ಹಾಗೂ ಸತ್ಯಮಿತ್ರ ಬಂಗೇರರು ಒಂದೊಂದು ರೂಪಾಯಿ ನೀಡಿ ತುಳುವ ಮಹಾಸಭೆಯ ಸದಸ್ಯರಾದುದಕ್ಕೆ ದಾಖಲೆ ಸಿಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಪರಿಷತ್ತಿನ 6-5-1931ರ ಸಭೆಯಲ್ಲಿ ಎಸ್. ಯು. ಪಣಿಯಾಡಿಯವರು ಜಿಲ್ಲೆಯ ಹೆಸರನ್ನು ತುಳುನಾಡು ಎಂದು ಬದಲಿಸಬೇಕೆಂದು ಠರಾವು ಮಂಡನೆ ಮಾಡಿದರು. ಶ್ರೀ ಎನ್. ಎಸ್. ಕಿಲ್ಲೆ ಈ ಠರಾವಿಗೆ ಅನುಮೋದನೆ ನೀಡಿದರು. ಈ ಠರಾವಿಗೆ ಇಪ್ಪತ್ತೆರಡು ಮಂದಿ ಸದಸ್ಯರು ಒಪ್ಪಿಗೆ ನೀಡಿದರು. ನಲುವತ್ತ ನಾಲ್ಕು ಮಂದಿ ಸದಸ್ಯರು ಈ ಠರಾವನ್ನು ವಿರೋಧಿಸಿದರು. ಆದರೆ ವಿಷಯ ನಿಯಾಮಕ ಮಂಡಳಿಯ ಎಲ್ಲ ಸದಸ್ಯರೂ ಈ ಜಿಲ್ಲೆಗೆ ದಕ್ಷಿಣ ಕನ್ನಡ ಜಿಲ್ಲೆ ಎಂಬ ಹೆಸರು ನೀಡಿರುವುದು ತಪ್ಪು ಎಂದು ಒಪ್ಪಿದರು. 'ಮಂಗಳೂರು' 'ತುಳುನಾಡು' ಈ ಎರಡು ಹೆಸರುಗಳಲ್ಲಿ ಮಂಗಳೂರು ಜಿಲ್ಲೆ ಎಂಬ ಹೆಸರು ಆಗಬಹುದೆಂದು ಹೆಚ್ಚಿನವರು ಅಭಿಪ್ರಾಯಪಟ್ಟರು.

1928ರಿಂದ 1940ರ ವರೆಗೆ 'ತುಳುವ ಮಹಾಸಭೆ'ಯ ಕಾರ್ಯಾಲಯ ಉಡುಪಿಯಲ್ಲಿತ್ತು. 1940ನೆ ಇಸವಿಯಲ್ಲಿ ಪಣಿಯಾಡಿಯವರು ಉಡುಪಿ ಬಿಟ್ಟು ಮಧುರೆಗೆ ಹೋದರು. ಅನಂತರ, ಪಣಿಯಾಡಿಯವರ ಗೆಳೆಯ ಶೀನಪ್ಪ ಹೆಗ್ಡೆಯವರು 'ತುಳುವ ಮಹಾಸಭೆ'ಯ ಕಚೇರಿಯನ್ನು ತನ್ನ ಊರು ಪೊಳಲಿಗೆ ವರ್ಗಾಯಿಸಿದರು. ಶೀನಪ್ಪ ಹೆಗ್ಡೆಯವರು ಹಾಗೂ ಬಡಕಬೈಲು ಪರಮೇಶ್ವರಯ್ಯನವರು 1984ರ ವರೆಗೆ 'ತುಳುವ ಮಹಾಸಭೆ'ಯನ್ನು ನಡೆಸಿ ಅನಂತರ ನಿಲ್ಲಿಸಿದರು. ಕರ್ನಾಟಕಏಕೀಕರಣದ ಡಿಂಡಿಮ ಧ್ವನಿಯ ಎದುರು ತುಳು ಚಳವಳದ ಚಂಡೆಯ ಕರೆ ಕ್ಷೀಣಿಸಿತು.
- ಮುರಳೀಧರ ಉಪಾಧ್ಯ ಹಿರಿಯಡಕ
mupadhyatulu.blogspot.com
1. ಎಸ್.ಯು. ಪಣಿಯಾಡಿ (ಕನ್ನಡ - 1997)
- ಮುರಳೀಧರ ಉಪಾಧ್ಯ ಹಿರಿಯಡಕ
ಪ್ರ. - ಮಂಗಳೂರು ವಿಶ್ವವಿದ್ಯಾನಿಲಯ

2. ಎಸ್.ಯು. ಪಣಿಯಾಡಿ (ತುಳು - 1996)
- ಮುರಳೀಧರ ಉಪಾಧ್ಯ ಹಿರಿಯಡಕ
ಪ್ರ. - ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು

Friday, October 15, 2010

tulu novel- s u paniyadi award

tulu koota udupi
s u paniyadi award - tulu novels
president[tulu koota]- dr bhaskaranda kumar
convener- gangadhara kidiyoor
adviser- pro muraleedhara upadhya hiriadka
[ 1] 1995 -dr k mahalinga bhat- naanajjer tude tirgaayer
[2] 1996-mrs m janaki brahmavara-kuduruda kEdage
[3] 1997- sankalakariya krishna salyan-chandrallid bolpaand
[4] 1998-pa.ramakrishna shastry macchina-pudvaar
[5] 1999-jitu nidle- moojanja aanaga
[6] 2000- balakrisha mudya- agga oone
[7]2001 -umesh bangera moodubidre- shipo shivaani
[8] 2002-mrs jayanthi s bangera- sorageda poo
[9] 2003- prabhakara neermarga- dalavvayi dugganne
[10]2004 muddu moodubelle- satyada suriya saayada pagari [11] 2005- kudreppady jagannatha alva- guttuda gouravo
[12] 2006-ananda krisna [ d k chouta]- mittabail yamunakke
[13] mrs kathyayini kujibettu-kabargattale
[14] mrs m janaki brahmavara- rukku
[15]mrs lalitha rai mangaluru-dashantara
[16]mrs vijaya shetty saletturu- tanne tooduda sonne

Bale Cha parka - Tulu Nataka

SUDDHA - The Cleansing Rites (3 minutes)

Naga Mandala

Guliga kola

Vishwa Tulu Sammelana, Bhootada Chavadi.mpg

tulu 1

Aish Speaking in Tulu in Mangalore

Vishwa Tulu Sammelana 2009

Tukaram Poojary - Crusader of Tulu Language and Tradtions

Tulu Grama with Manohar Prasad 1

Amazing Tulunadu/Tulu Facts (Presented By WTN)-Short Film

Navantiya Byari Song

TULU SUPERHIT SONG....BANGARANNA........FROM THE ALBUM.....DEEPA NALIKE....

TULU SUPERHIT SONG....PORTU MOODI....

Monday, October 4, 2010

tulu column in udayavani

Dr Suneeta shetty is a major poetess in tulu literature. She wrote tulu column in the mumbai edition of udayavani kannada daily.A collection of her tulu columns is published recently-'gir gir girijaabai'this book contains 30 tulu articles written by dr suneeta shetty.

Friday, October 1, 2010

dr wahab doddamane a

dr wahab doddamane [64] famous kannada , english, beary writers' death [oct1,2010] i a sad news to tulu writers. his books- muslims in dakshina kannada, tulunaadina muslimaru[kannada] beary- kannada -english- arthakosha[dictionary of beary language]oddu kidaavu oodu[ beary children book]
in his forward to ' Muslims in Dakshina Kannada'[1993] Dr K G Vasantha madhava [ author of 'religion in coastal karnataka-1985] says-'in this context Dr. Wahabs' work is agood sign in the study of indian historiagraphy. The author has taken keen interest to assess the role of the muslims in the cultural evoluton in his district. dakshina kannada. To depict the role of the muslimsin the region of his study.Dr wahab has collected a large number of sources of different nature and tried to analyse them. His work' muslims in dakshina kannada' is a pioneer work on islam in karnataka in general and his district in particular.His work sorces.'is historical exploration guided by various sorces . .