Sunday, October 31, 2010

TULU SHORT STORIES

ತುಳು ಸಣ್ಣಕತೆ

 ಮುರಳೀಧರ ಉಪಾಧ್ಯ ಹಿರಿಯಡಕ
 ತುಳು ಜನಪದ ಕತೆಗಳ ಲೋಕ ಸಮೃದ್ಧವಾಗಿದೆ. ಗೀತಾ ಕುಲಕಣರ್ಿ ಅವರ 'ತುಳು ಜಾನಪದ ಕತೆಗಳು' (1981), ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ 'ತುಳುವರ ಜನಪದ ಕತೆಗಳು' (1987), ಡಾ| ಪುರುಷೋತ್ತಮ ಬಿಳಿಮಲೆ ಅವರ 'ಅಜ್ಜಿಕತೆಕುಲು' - ಇಂಥ  ಕೆಲವು ಸಂಕಲನಗಳು ಪ್ರಕಟವಾಗಿವೆ. ಸೇವ ನವಿರಾಜ ಮಲ್ಲ, ಕನರಾಡಿ ವಾದಿರಾಜ ಭಟ್, ಡಾ| ವಾಮನ ನಂದಾವರ, ಡಾ| ಬಿ. ಎ. ವಿವೇಕ ರೈ, ಅಮೃತ ಸೋಮೇಶ್ವರ, ಡಾ| ಪುರುಷೋತ್ತಮ ಬಿಳಿಮಲೆ - ಇವರೆಲ್ಲ ತುಳು ಜನಪದ ಕತೆಗಳನ್ನು ಸಂಗ್ರಹಿಸಿದ್ದಾರೆ. ಎ. ಕೆ. ರಾಮಾನುಜನ್ ಅವರ 'ಪೊಕ್ ಟೆಲ್ಸ್ ಫ್ರಮ್ ಇಂಡಿಯಾ ' ಸಂಕಲನದಲ್ಲಿ ಕೆಲವು ತುಳು ಕತೆಗಳಿವೆ.
 ಎಂ. ವಿ. ಹೆಗ್ಡೆಯವರ 'ಮದಿಮಾಳತ್ತ್ ಮದಿಮಾಯೆ' (1933) ಗಾಂಧೀಯುಗದಲ್ಲಿ ಪ್ರಕಟವಾದ ಒಳ್ಳೆಯ ಕತೆ 'ಜವನೆರೆ ಕೂಟ'ದ ಮೋಹನ ಶೆಟ್ಟರು ಮದುಗಳ ವೇಷಧರಿಸಿ, ಕೊರಗ ಶೆಟ್ಟರ ಐದನೇ ಮದುವೆ ನಿಲ್ಲಿಸುವುದು - ಈ ಕತೆಯ ತಿರುಳು. ಇದು ಆಧುನಿಕ ತುಳು ಕಥಾಸಾಹಿತ್ಯದ ಮೊದಲ ಕತೆ. 'ಪೊಸ ಜೀವನ' (1973) ಸಂಕಲನದ ಕತೆಗಾರ ರಮೇಶ್ ಕಾನರ್ಾಡೆ ತನ್ನ ಯೌವ್ವನದಲ್ಲಿಯೇ (ನಿಧನ 1976) ತೀರಿಕೊಂಡರು. ಪುರುಷಪ್ರಧಾನ ಸಮಾಜದಲ್ಲಿನ ಮಹಿಳೆಯರ ಶೋಷಣೆ 'ಪೊಸ ಜೀವನ'ದ ಕತೆಗಳ ವಸ್ತು. 'ಕಡೆತ ಪಾತೆರ' ಕತೆಯಲ್ಲಿ ದಲಿತರ ಯುವಕ ಆನಂದ, ಬ್ರಾಹ್ಮಣರ ಯುವತಿ ಭಾರತಿಯನ್ನು ಪ್ರೀತಿಸಿ ಮದುವೆಯಾಗಲು ನಿರ್ಧರಿಸುತ್ತಾನೆ. ಆದರೆ ಆನಂದನ ಕೊಲೆಯಾಗುತ್ತದೆ. ಭಾರತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
 'ಕಿನ್ಯ ಕತೆಕ್ಲು' (1986), 'ಬೋಂಟೆ' (1988) ಕಥಾಸಂಕಲನಗಳ ಬಾ. ಸಾಮಗರ ಕತೆಗಳಲ್ಲಿ ಅವರದ್ದೇ ಆದ ವಿಶಿಷ್ಟ ತುಳು ಗದ್ಯ ಸೈಲಿಯಲ್ಲಿದೆ. ಅವರ ಸಾಮಾಜಿಕ ವಿಡಂಬನೆ 'ದೀರ್ಸಲೆ' ಮೆಣಸಿನಂತೆ ಖಾರವಾಗಿದೆ. ಗಂಜೀಫಾದ ಚಿಕಣಿ ಚಿತ್ರಗಳಲ್ಲಿರುವಂಥ ಕುಸುರಿ ಕೆಲಸ ಸಾಮಗರ ಕತೆಗಳಲ್ಲಿವೆ. 'ಉದಿಪು' (1987) ಹಾಗೂ ಒಸಯೊ' (1994) ಸಂಕಲನಗಳ ಮುದ್ದು ಮೂಡುಬೆಳ್ಳೆ ಗ್ರಾಮೀಣ ಬದುಕಿನ ವಿವಿಧ ಮುಖಗಳನ್ನು ಚಿತ್ರಿಸುವ ಕತೆಗಳನ್ನು ಬರೆದಿದ್ದಾರೆ. 'ಒಂಜಿ ಸಾದಿದ ಕತೆ', 'ಊರು ಮುಕರ್ುಂಡುಗೆ' - ಈ ಕತೆಗಳ ಕಥನ ತಂತ್ರದಿಂದಾಗಿ ಗಮನ ಸೆಳೆಯುತ್ತವೆ.
 'ಕರಿಯವಜ್ಜೆರೆನ ಕತೆಕುಲು' (1996) ಸಂಕಲನದ ಡಿ. ಕೆ. ಚೌಟ (ಕಾವ್ಯನಾಮ - 'ಆನಂದ ಕೃಷ್ಣ') ತುಳುವಿನ ಮಹತ್ತ್ವ ಕತೆಗಾರರಾಗಿದ್ದಾರೆ. ಕಲಿಯುವ ನೆನಪುಗಳ ರೀತಿಯಲ್ಲಿ ಬಿಚ್ಚಿಕೊಳ್ಳುವ ಇಲ್ಲಿನ ಕತೆಗಳು ಜನಪದ ಬದುಕಿನ ಬಹುರೂಪಗಳನ್ನು, ಜಾತಿಗಳ ಅಂತರ್ ಸಂಬಂಧವನ್ನು ಆತ್ಮೀಯವಾಗಿ ಚಿತ್ರಿಸುತ್ತವೆ. ಡಾ| ಪ್ರಭಾಕರ ಶಿಶಿಲ ಅವರ 'ಬಾರಣೆ' (1994) ಸಂಕಲನದ ಕತೆಗಳು ದಲಿತರ ಶೋಷಣೆಯನ್ನು ಕಲಾತ್ಮಕವಾಗಿ ಚಿತ್ರಿಸುತ್ತವೆ. ಜಯಂತಿ ಎಸ್. ಸುವರ್ಣರ 'ಮನಸ್ ಬದಲಾನಗ', ಮನೋಹರ ಪ್ರಸಾದರ 'ಬದ್ಕ್ದ ಬಂಡಿ' (1989), ಗಣೇಶ್ ಅಮೀನ್ ಸಂಕಮಾರ್ ಅವರ 'ದೋಲು' - ಇವು ಗಮನಾರ್ಹ ಕಥಾ ಸಂಕಲನಗಳು.
ಸಂಕಲನಗಳು :
 ಡಾ| ಅಮ್ಮೆಂಬಳ ಬಾಳಪ್ಪನವರ 'ತುಳುಸಿರಿ' (1971), ಎಸ್. ಆರ್. ಹರಗ್ಡೆಯವರ 'ತುಳುಕೂಟ' (1971), ಮಾಧವ ಕುಲಾಲರ 'ತುಳುವೆರೆ ಬಂಧು', ರಮೇಶ ಕಾನರ್ಾಡರ 'ತುಳುವಾಣಿ' (1973), ಕುದ್ಕಾಡಿ ವಿಶ್ವನಾಥ ರೈ ಅವರ 'ಉರಲ್', ಗಣನಾಥ ಎಕ್ಕಾರು ಅವರ 'ರಾಶಿ', ಕಲ್ಲಾಯಿ ಜಗನ್ನಾಥ ರೈ ಅವರ 'ತುಳುನಾಡ್' (1981), ಮುಂಡಪ್ಪ ಬೋಳೂರು ಅವರ 'ತುಳುವೆರೆ ಕೇದಗೆ' (1991) - ಇಂಥ ಹಳೆಯ ತುಳು ಪತ್ರಿಕೆಗಳಲ್ಲಿ, ಈಗ ಪ್ರಕಟವಾಗುತ್ತಿರುವ ಬಾ. ಸಾಮಗರ 'ತುಳುವೆರ್' (1984), ಬಿ, ಮಂಜುನಾಥರ 'ತುಳುರಾಜ್ಯ' (1985) ಪೇರೂರು ಜಾರು ಅವರ 'ತೂಟೆ' (1987), ಎಂ. ವಿಠಲ ಪುತ್ತೂರು ಅವರ 'ತುಳುವೆರೆ ತುಡರ್' (1991), ಪಿ. ಸಿ. ರಾವ್ ಅವರ 'ತುಳು ಬೊಳ್ಳಿ' (1994), ವೇದವ್ಯಾಸ ಕೋಟೆಕಾರ್ ಅವರ 'ಪೊಸಕುರಾಲ್' (1996), ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿಯ 'ಮದಿಪು' ಈ ಪತ್ರಿಕೆಗಳಲ್ಲಿ ನೂರಾರು ತುಳು ಕತೆಗಳು ಪ್ರಕಟವಾಗಿವೆ. 1976ರಲ್ಲಿ ಆರಂಭಗೊಂಡ ಮಂಗಳೂರು ಆಕಾಶವಾಣಿಯಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಕತೆಗಳು ಪ್ರಸಾರಗೊಂಡಿವೆ.
 ವಸಂತ ಕುಮಾರ್ ಪೆರ್ಲ ಅವರು ಸಂಪಾದಿಸಿರುವ 'ಆಕಾಶವಾಣಿ ತುಳುಕತೆಕುಲು' (1996) ಸಂಕಲನದಲ್ಲಿ ಇಪ್ಪತ್ತು ಕತೆಗಳಿವೆ. ಫಕೀರ್ ಮುಹಮ್ಮದ್ ಕಟ್ಪಾಡಿ ಅವರ 'ಗಡಿಹಾರ', ಅಮೃತಾ ಶೆಟ್ಟಿ ಆತ್ರಾಡಿ ಅವರ 'ಒಂಜಿ ನೆಂಪುದ ನಡುಟು', ಗೀತಾ ಸುರತ್ಕಲ್ ಅವರ 'ದೋಲು', ಬೇಬಿ ಶೆಟ್ಟಿ ನೈಮಾಡಿ ಅವರ 'ರೆಂಜಯಿದ ಮರಲಾ ಯಾನ್ಲಾ', ಬಾಬೋಜಿ ರಾವ್ ಅವರ 'ಹಕ್ಕುದಾರೆ', ಮುದ್ದು ಮೂಡುಬೆಳ್ಳೆ ಅವರ 'ಬೀಮಾಬಿರು', ನಾ. ಉಜಿರೆ ಅವರ 'ಮಿಲ್ಟ್ರಿ ತ್ಯಾಂಪಣ್ಣೆ', ಪಾ. ಸಂಜೀವ ಬೋಳಾರ ಅವರ 'ಕತೆತ ನಡುಟೊಂಜಿ ಕತೆ' - ಈ ಕತೆಗಳು ವಸ್ತು ವೈವಿಧ್ಯ ಹಾಗೂ ಕಸುಬುಗಾರಿಕೆಯಿಂದ ಗಮನಾರ್ಹವಾಗಿದೆ.


No comments:

Post a Comment