Sunday, October 31, 2010

TULU LITRETURE

                         ತುಳು ಸಾಹಿತ್ಯ
                       
ಮುರಳೀಧರ ಉಪಾಧ್ಯ ಹಿರಿಯಡಕ

             ಸಂಸ್ಕೃತ ಕವಿ ಹಾಗೂ ಕನ್ನಡ ಕೀರ್ತನಕಾರರಾಗಿದ್ದ ಉಡುಪಿಯ ಸೋದೆ ಮಠದ ವಾದಿರಾಜ ಸ್ವಾಮಿಗಳು (1480-1600) ಬರೆದ ದಶಾವತಾರದ ಹಾಡು 'ತುಳುವಿನ ಲಿಖಿತ ಸಾಹಿತ್ಯದ ಪ್ರಾಚೀನ ಲಭ್ಯ ದಾಖಲೆಗಳಲ್ಲೊಂದು. 'ತುಳುವಿನಲ್ಲಿ ಲವಲೇಶವಾದರೂ ಸಾಹಿತ್ಯವಿಲ್ಲ' ಎಂದು ಎಂ. ಗೋವಿಂದ ಪೈಗಳು 1923ರಲ್ಲಿ ಬರೆದರು. ಕ್ಷೇತ್ರಕಾರ್ಯದಲ್ಲಿ ಅನಾಸಕ್ತರಾಗಿದ್ದ ಸಂಶೋಧಕ ಪೈಗಳಿಗೆ ತನ್ನ ಕಾಸರಗೋಡು ತಾಲೂಕಿನಲ್ಲೆ ಇದ್ದ ಪ್ರಾಚೀನ ತುಳು ಕಾವ್ಯಗಳು ಕಾಣಿಸಿಲ್ಲ. ತುಳು ಕವಿ, ಸಂಶೋಧಕ ವೆಂಕಟರಾಜ ಪುಣಿಂಚತ್ತಾಯರು ಇತ್ತೀಚೆಗೆ ತುಳುವಿನ ಕೆಲವು ಪ್ರಾಚೀನ ಗ್ರಂಥಗಳನ್ನು ಶೋಧಿಸಿ, ಸಂಪಾದಿಸಿದ್ದಾರೆ.
 ವಿಷ್ಣುತುಂಗವ 'ಶ್ರೀ ಭಾಗವತೊ' (1984) ಸುಮಾರು ಹದಿನೇಳನೆಯ ಶತಮಾನದ ಕೃತಿ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ತುಳು ಭಾಷೆಯ ಹಳೆಯ ರೂಪದ ಅಭಿನಯಕ್ಕೆ ಅಮೂಲ್ಯ ಆಕರ ಗ್ರಂಥವಾಗಿರುವ ಈ ಕಾವ್ಯದ ಬರೇ ಮೂರು ಸ್ಕಂಧಗಳು (ಎರಡು ಸಾವಿರ ಪದ್ಯಗಳು) ಸಿಕ್ಕಿವೆ. ಬಹುಶಃ ಹದಿನೇಳನೆಯ ಶತಮಾನದ ರಚನೆಯಾಗಿರುವ ಇನ್ನೊಂದು ತುಳು ಕಾವ್ಯ - 'ಕಾವೇರಿ' (1987). ಇದರ ಪೂರ್ಣ ಪಾಠ ಸಿಕ್ಕಿಲ್ಲ. ಮೂರನೆಯ ಒಂದು ಭಾಗ ಮಾತ್ರ ಲಭ್ಯವಾಗಿದೆ. 'ಸ್ಕಂಧಪುರಾಣ'ದ ಕಾವೇರಿ ನದಿಯ ಕತೆಯನ್ನು ನಿರೂಪಿಸುವ ಈ ಕಾವ್ಯ/ಕವಿ ಯಾರೆಂದು ಗೊತ್ತಾಗಿಲ್ಲ. 'ಕಾವೇರಿ'ಯ ಕವಿ ಕುಮಾರವ್ಯಾಸನಿಂದ ಪ್ರಭಾವಿತನಾಗಿದ್ದಾನೆ. ತೆಂಕಿಲ್ಲಾಯ ಎಂಬ ಕುಲನಾಮದ ಲೇಖಕ ಬರೆದಿರುವ 'ತುಳು ದೇವೀ ಮಹಾತ್ಮೆ' ತುಳುವಿನ ಪ್ರಾಚೀನ ಗದ್ಯ ಕೃತಿ. 'ಶ್ರೀ ಭಾಗವತೊ', 'ಕಾವೇರಿ', 'ದೇವಿ ಮಹಾತ್ಮೆ' ಈ ಮೂರು ಕೃತಿಗಳು ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಯಲ್ಲಿ ಲಭ್ಯವಾಗಿದೆ. ಸಂಶೋಧಕ ಪುಣಿಂಚಿತ್ತಾಯರು ಊಹಿಸಿರುವಂತೆ, 'ತೌಳವಾಧೀಶರೆಂದೇ  ಬಿರುದು ಧರಿಸಿರುವ ಕುಂಬಳೆ ಅರಸರು, ತುಳು ಕವಿಗಳಿಗೆ, ತುಳು ಬರಹಗಾರರಿಗೆ ಪ್ರೋತ್ಸಾಹ ನೀಡಿರಬಹುದು'.
ಪಾಡ್ದನಗಳು ತುಳುನಾಡಿನ ಭೂತಾರಾಧನೆಯ ಸಂದರ್ಭದಲ್ಲಿ ವಿಧಿವತ್ತಾಗಿಯೂ, ಇತರ ಸಂದರ್ಭಗಳಲ್ಲಿ ಹವ್ಯಾಸಕ್ಕಾಗಿಯೂ ನಿರೂಪಿಸಿರುವ ಜನಪದ ಕಥನಕವನಗಳು. ತುಳುನಾಡಿನ ಭೂತಗಳ ಸಂಖ್ಯೆ ಸುಮಾರು ನಾಲ್ನೂರು ಹೆಚ್ಚಿನ ಭೂತಗಳಿಗೆ ಸಂಬಂಧಪಟ್ಟ ಪಾಡ್ದನಗಳು ಲಭ್ಯವಿವೆ. ಪಾಡ್ದನಗಳ ರಚನೆಯ ಕಾಲ ಹದಿನೈದರಿಂದ ಹದಿನೇಳನೆಯ ಶತಮಾನವೆಂದು ವಿದ್ವಾಂಸರು ತೀಮರ್ಾನಿಸಿದ್ದಾರೆ. ರೆ| ಎ. ಮೇನರ್ ಅವರ 'ತುಳು ಪಾಡ್ದನಗಳು' (1886) ಗ್ರಂಥದಲ್ಲಿ ಇಪ್ಪತ್ತೊಂದು ಪಾಡ್ದನಗಳಿವೆ. ಕನರಾಡಿ ವಾದಿರಾಜ ಭಟ್ಟರು ಸಂಪಾದಿಸಿದ 'ಪಾಡ್ದನಗಳು' (1974) ಒಂದು ಅಸಾಧಾರಣ ಸಂಕಲನ. ಅಮೃತ ಸೋಮೇಶ್ವರ ಅವರು ಸಂಪಾದಿಸಿರುವ 'ತುಳು ಪಾಡ್ದನ ಸಂಪುಟ'ದಲ್ಲಿ (1997) ಹದಿನಾರು ತುಳು ಪಾಡ್ದನಗಳು ಹಾಗೂ ಅವುಗಳ ಕನ್ನಡ ಭಾಷಾಂತರಗಳಿವೆ. ಕೆಲವು ಪಾಡ್ದನಗಳಲ್ಲಿ ಭೂತಗಳಿಗೆ ಹಾಗೂ ಪೌರಾಣಿಕ ವ್ಯಕ್ತಿಗಳಿಗೆ ಸಂಬಂಧಿಸಿದ ಅತಿಮಾನುಷ ವಸ್ತುಗಳಿವೆ. ಮಾನವರಾಗಿದ್ದು ಭೂತತ್ತ್ವವನ್ನು ಹೊಂದಿದ ವ್ಯಕ್ತಿಗಳ ಕುರಿತಾದ ಹಲವು ಪಾಡ್ದಗಳಿವೆ. ಇನ್ನೂ ಕೆಲವು ಲೌಕಿಕ ವಸ್ತುಗಳುಳ್ಳ  ಪಾಡ್ದನಗಳಿವೆ.
ಕಾಡು ಹಂದಿ, ತುಳುನಾಡಿನ 'ಪಂಜುಲರ್ಿ' (ಪಂಜಿಕುಳರ್ೆ = ಹಂದಿ ಪಿಳ್ಳೆ) ದೈವವಾಗಿದೆ. ಪಂಜುಳರ್ಿಯ ತಂದೆ ತಾಯಿ ಮೊದಲ ಅಣ್ಣತಂಗಿಯರಾಗಿದ್ದು ಅನಂತರ ದಂಪತಿಗಳಾದ ಕತೆ ಮಾನವಶಾಸ್ತ್ರದ ನೆಲೆಯಿಂದ ಕುತೂಹಲಕಾರಿಯಾಗಿದೆ. ಧೂಮಾವತಿಯ ಆರಾಧನೆ 'ಜುಮಾದಿ' ಎಂಬ ಹೆಸರಿನಲ್ಲಿ ನಡೆಯುತ್ತದೆ. 'ಬಾಮಕುಮಾರ'ನ ಕತೆ ಗಣಪತಿಯ ಕತೆಯ ಪಾಠಾಂತರದಂತಿದೆ. ಈಶ್ವರನಿಗೆ ಶರಣಾದ ಅಸುರನನ್ನು ಬಾಮಕುಮಾರ ಕೊಲ್ಲುತ್ತಾನೆ. ಇದರಿಂದ ಕೆರಳಿ ಕೆಂಡವಾದ ಈಶ್ವರ ಬಾಮಕುಮಾರನ ತಲೆ ಕಡಿಯುತ್ತಾನೆ. 'ಬಲಿಯೇಂದ್ರ' ಪಾಡ್ದನದಲ್ಲಿ ಮಹಾಪರಂಪರೆ ಹಾಗೂ ಕಿರುಪರಂಪರೆಗಳ ಮುಖಾಮುಖಿಯನ್ನು ಕಾಣುತ್ತೇವೆ.
ಅಹಿಂಸೆಯ ಸಂದೇಶ ನೀಡಿದ ಗೊಮ್ಮಟ ಸ್ವಾಮಿಯ ಮೂತರ್ಿ ರಚಿಸಿದ ಶಿಲ್ಪಿ ಬೀರ ಕಲ್ಕುಡ ಅವನ ರಾಜನಿಂದ ಅನುಭವಿಸಿದ ಹಿಂಸೆ, ಬೀರ ಕಲ್ಕುಡ ಮತ್ತು ಕಲ್ಲುಟರ್ಿಯ ಪ್ರತೀಕಾರ - 'ಬೀರ ಕಲ್ಕುಡ' ಪಾಡ್ದನದ ವಸ್ತು. ದೈವದ ಗುಡಿಯ ಮಾಡಿಗೆ ಹತ್ತಿ ಸಮೀಪದ ಮರದ ಹಣ್ಣನ್ನು ಕಿತ್ತ 'ಕೊರಗತನಿಯು' ಮಾಯಕಗೊಳ್ಳುತ್ತಾನೆ. 'ಸತ್ಯನಾವುರದ ಸಿರಿ' ತನ್ನ ಹೊಣೆಗೇಡಿಯಾದ ವ್ಯಭಿಚಾರಿ ಗಂಡನನ್ನು ಧಿಕ್ಕರಿಸಿ ಮರುಮದುವೆಯಾಗುತ್ತಾಳೆ, ಕಾರಣಿಕದ ಸತಿಯಾಗುತ್ತಾಳೆ. (ಅಮೃತ ಸೋಮೇಶ್ವರ ಅವರು ಸಂಪಾದಿಸಿದ 'ತುಳು ಪಾಡ್ದನ ಸಂಪುಟ', ಎ. ವಿ. ನಾವುಡರು ಸಂಪಾದಿಸಿರುವ, 'ಗಿಡಕೆರೆ ರಾಮಕ್ಕ ಮುಗ್ಗೇರ್ತಿ ಕಟ್ಟಿದ ಸಿರಿ ಪಾಡ್ದನ' (1999), ಲಾರಿ-ಹೊಂಕೊ ಅವರು ಸಂಪಾದಿಸಿರುವ 'ಸಿರಿ ಎಪಿಕ್ ಪರ್ಫಾರ್ಮ್ಡ್ ಬೈ ಗೋಪಾಲ ನಾಯ್ಕ' (1999), ಈ ಗ್ರಂಥದಲ್ಲಿ 'ಸಿರಿ ಪಾಡ್ದನ'ದ ಮೂರು ವಿಭಿನ್ನ ಪಠ್ಯಗಳು ಸಿಗುತ್ತವೆ. 'ಕೋಟೆದ ಬಬ್ಬು ಬಾರಗೆ' ಪಾಡ್ದನದಲ್ಲಿ ಮುಂಡಾಲರ ಪ್ರತಿಭಾವಂತ ಯುವಕ ಕೋಡದಬ್ಬು, ಮೇರವರ್ಗದ ತನ್ನಿ ಮಾನಿಗ ಅಣ್ಣ-ತಂಗಿಯರಂತೆ ಬಾಳುತ್ತಾರೆ; ಕಾರಣಾಂತರಗಳಿಂದ ಮಾಯಕವಾಗಿ ದೈವಗಳಾಗುತ್ತಾರೆ. 'ಪೆರಿಂಜಗತ್ತು ದೇವಪೂಂಜ' ಪರಾಕ್ರಮಿಯಾಗಿದ್ದರೂ, ಅಹಂಕಾರ, ಉದ್ಧಟತನ, ಕ್ರೌರ್ಯಗಳಿಂದ ದುರಂತದತ್ತ ಸಾಗುತ್ತಾನೆ. 'ಕೊಲ್ಲೂರ ಮುಕಾಂಬಿ' ಪಾಡ್ದನದಲ್ಲಿ ವಿವಾಹಿತೆ ಮುಕಾಂಬಿ, ಕಡಂಬಾರ ಮಯ್ಯನಿಂದ ಅತ್ಯಾಚಾರಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. 'ಹೊನ್ನಮ್ಮ ಜೇವು' ಮಾಲಿಂಗ ಸೆಟ್ಟಿಯ ಮಡದಿ. ಪುತ್ತೂರ ಜಾಗಣಂತೋಡನೆಂಬ ಶ್ರೀಮಂತನ ಜಾಲಕ್ಕೆ ಸಿಲುಕಿದ ಅವಳನ್ನು ಮಾಲಿಂಗ ಸೆಟ್ಟಿ ಕೊಲ್ಲುತ್ತಾನೆ. 'ಮದನಗ' ಪಾಡ್ದನದಲ್ಲಿ ಬಲಾತ್ಕಾರಕ್ಕೊಳಗಾದ ನಿರಪರಾಧಿ ಹೆಣ್ಣಿನ ಕತೆಯಿದೆ, ತುಳು ಪಾಡ್ದನ ಕತೆಗಳಿಗೆ ಯಾವ ರೀತಿ ಹೊಸ ರೂಪ ಕೊಡಬಹುದೆಂಬುದಕ್ಕೆ ಪಂಜೆ ಮಂಗೇಶರಾಯರ 'ಕೋಟಿ-ಚೆನ್ನಯ' (1925) ಕನ್ನಡ ಕಾದಂಬರಿ ಮಾದರಿಯಾಗಿದೆ. ಭತ್ತದ ನಾಟಿ ಮಾಡುವ ಸಂದರ್ಭದಲ್ಲಿ ಹೆಂಗಸರು ಹಾಡುವ ಹಾಡುಗಳು ತುಳುವಿನ 'ಕಬಿತ'ಗಳು - 'ತುಳು ಕಬಿತಗಳು' (1996 - ಬಿ. ಎ. ವಿವೇಕ ರೈ, ರಾಜಶ್ರೀ) ಸಂಕಲನದಲ್ಲಿ ವೈವಿಧ್ಯಪೂರ್ಣ ವಸ್ತುಗಳುಳ್ಳ 'ಕಬಿತ'ಗಳಿವೆ.
ಬಾಸೆಲ್ ಮಿಶನ್ ಪ್ರಕಟಿಸಿದ ತುಳು ಪುಸ್ತಕಗಳು, ಎಸ್. ಯು. ಪಣಿಯಾಡಿಯವರು 1928ರಲ್ಲಿ ಉಡುಪಿಯಲ್ಲಿ ಆರಂಭಿಸಿದ ತುಳುವ ಮಹಾಸಭೆ, ಮಂಗಳೂರು ಆಕಾಶವಾಣಿಯಲ್ಲಿ ತುಳು ಕಾರ್ಯಕ್ರಮಗಳ ಪ್ರಸಾರದ ಆರಂಭ (1976), ಪ್ರೊ. ಕು. ಶಿ. ಹರಿದಾಸ ಭಟ್ಟರು ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಆರಂಭಿಸಿದ ತುಳು ನಿಘಂಟು ಯೋಜನೆ (1979), ಶ್ರೀ ವೀರಪ್ಪ ಮೊಯಿಲಿಯವರು ಮುಖ್ಯಮಂತ್ರಿಯಾಗಿದ್ದಾಗ ಸ್ಥಾಪನೆಗೊಂಡ 'ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ' (1994 - ಪ್ರಥಮ ಅಧ್ಯಕ್ಷರು - ಡಾ| ಬಿ. ಎ. ವಿವೇಕ ರೈ) - ಇವು ತುಳು ಸಾಹಿತ್ಯ ಚಳುವಳಿಗೆ ವಿವಿಧ ರೀತಿಯಲ್ಲಿ ಪ್ರೇರಣೆ ನೀಡಿವೆ.
ಸ್ವಿಝಲೆರ್ಂಡಿನ ದಕ್ಷಿಣ ಕನ್ನಡ ಜಿಲ್ಲೆಗೆ ಬಂದ ಬಾಸೆಲ್ ಮಿಷನ್ 1841ರಲ್ಲಿ ಮಂಗಳೂರಿನ ಬಲ್ಮಠದಲ್ಲಿ ಬಾಸೆಲ್ ಮಿಷನ್ ಪ್ರಸ್ಸನ್ನು ಆರಂಭಿಸಿತು. ಜಮನರ್ಿಯ  ರೆ| ವಿ. ಮೇನರ್ ಅವರ 'ತುಳು-ಇಂಗ್ಲಿಷ್ ನಿಘಂಟು' (1886), 'ಇಂಗ್ಲಿಷ್ ತುಳು ನಿಘಂಟು' (1888), 'ಪಾಡ್ದನೊಳು' (1886), 'ಸಹಸ್ರಾರ್ಥ ಗಾದೆಲು' (1874), ತುಳು ಗೀತೊಳೆ ಪುಸ್ತಕ' (ವಿಸ್ತೃತ ಆವೃತ್ತಿ - 1878), ಜಮನರ್ಿಯ ರೆ| ಜೆ. ಬ್ರಿಗೆಲ್ ಅವರು ಇಂಗ್ಲಿಷಿನಲ್ಲಿ ಬರೆದ ತುಳು ವ್ಯಾಕರಣ' (1872), ಎ. ಸಿ. ಬವರ್ೆಲ್ ಅವರ 'ದಿ ಡೆವಿಲ್ ವರ್ಶಿಪ್ ಆಫ್ ದಿ ತುಲುವಾಸ್' (1894-97) - ಇಂಥ ಹಲವು ಕೃತಿಗಳನ್ನು ಬಾಸೆಲ್ ಮಿಷನ್ ಪ್ರಕಟಿಸಿತು. ಕ್ರೈಸ್ತ ಧರ್ಮ ಪ್ರಚಾರದ ಉದ್ದೇಶದಿಂದ ಬಾಸೆಲ್ ಮಿಷನ್ನ ಧರ್ಮಗುರುಗಳು ಬೈಬಲನ್ನು ತುಳುವಿಗೆ ಭಾಷಾಂತರಿಸಿದರು (1859); ತುಳುವಿನಲ್ಲಿ ನೂರಾರು ಸ್ತೋತ್ರಗೀತಗಳನ್ನು ರಚಿಸಿದರು.
ತನ್ನ ತಾಯ್ನುಡಿ ಗುಜರಾತಿನಲ್ಲಿ ಬರೆಯುತ್ತಿದ್ದ ಮಹಾತ್ಮಾ ಗಾಂಧೀಜಿಯವರ ಭಾಷಾಧೋರಣೆಯಿಂದ 'ತುಳು ಜನಗಳ ಆತ್ಮೋದ್ಧಾರದ 'ತುಳು ಚಳುವಳಿಗೆ ಪ್ರೇರಣೆ ಸಿಕ್ಕಿತು. ಗುಜರಾತಿನ ಬರೋಡಾದಲ್ಲಿ ಗ್ರಂಥಪಾಲಕರಾಗಿದ್ದ ಎಸ್. ಯು. ಪಣಿಯಾಡಿಯವರು ಉಡುಪಿಗೆ ಬಂದು, 1928ರಲ್ಲಿ 'ತುಳುವ ಮಹಾಸಭೆ' ಆರಂಭಿಸಿದರು. ದೇಶದಿಂದ 'ಬಿಳಿ ಮುಖದ' ಫಿರಂಗಿಯರನ್ನು ಓಡಿಸಬೇಕೆಂದು ನಡೆಯುತ್ತಿದ್ದ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ತುಳುನಾಡಿನ ಮೂರು ಯುವಕರು 1930ನೇ ಇಸವಿಯಲ್ಲಿ ವೆಲ್ಲೂರಿನ ಸೆಂಟ್ರಲ್ ಜೈಲಿನಲ್ಲಿದ್ದರು. ಅವರು ಈ ಜೈಲಿನಲ್ಲಿ ತುಳುಕತೆ, ಕವನ ಬರೆಯುತ್ತಿದ್ದರು. ಆ ಮೂವರು - ಎಸ್. ಯು. ಪಣಿಯಾಡಿ, ಪೊಳಲಿ ಶೀನಪ್ಪ ಹೆಗ್ಡೆ ಹಾಗೂ ಕೆ. ಬಿ. ನಾರಾಯಣ ಶೆಟ್ಟಿ, ಕಿಲ್ಲೆ.
 

No comments:

Post a Comment